16 ಕೋಟಿ ಮದ್ಯ ವ್ಯಸನಿಗಳು

16 ಕೋಟಿ ಮದ್ಯ ವ್ಯಸನಿಗಳು

ನವದೆಹಲಿ, ಜು.05 : ಭಾರತದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯಪಾನಿಗಳಿದ್ದು, ನಂತರದ ಸ್ಥಾನದಲ್ಲಿ ಗಾಂಜಾ ಮತ್ತಿತರ ಮಾದಕ ವಸ್ತುಗಳ ವ್ಯಸನಿಗಳಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ದೇಶದಲ್ಲಿ 16 ಕೋಟಿ ಮದ್ಯಪಾನಿಗಳಿದ್ದು, ಪೈಕಿ 5.7 ಕೋಟಿ ಜನ ಮದ್ಯದ ಚಟಕ್ಕೆ ತುತ್ತಾಗಿದ್ದಾರೆ. ಇವರಿಗೆ ನೆರವಿನ ಅವಶ್ಯಕತೆ ಇದೆ. ಅದೇ ರೀತಿಯಲ್ಲಿ 3.1 ಕೋಟಿ ಜನ ಗಾಂಜಾಕ್ಕೆ ಮತ್ತು 77 ಲಕ್ಷ ಜನ ಇತರೆ ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ. 36 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಿದ ಸಮೀಕ್ಷೆ ಅನ್ವಯ ಈ ಮಾಹಿತಿ ಸಂಗ್ರಹಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos