ಮದುವೆ ದಿನವೇ ಸಾಮೂಹಿಕ ಅತ್ಯಾಚಾರ

ಮದುವೆ ದಿನವೇ ಸಾಮೂಹಿಕ ಅತ್ಯಾಚಾರ

ಮುಜಾಫರ್ನಗರ, ಮಾ.15, ನ್ಯೂಸ್ ಎಕ್ಸ್ ಪ್ರೆಸ್: ಮದುವೆ ದಿನವೇ ಹೊಸ ಮದುವೆಯ ಹೆಣ‍್ಣಿನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಇಂದು ಮುಜಾಫರ್ನಗರದಲ್ಲಿ ನಡೆದಿದೆ.

26 ವರ್ಷದ ಯುವತಿಯ ಮೇಲೆ ಮದುವೆಯ ಮೊದಲ ರಾತ್ರಿಯೇ ಗಂಡ ಹಾಗೂ ಭಾವನಿಂದ ಅತ್ಯಾಚಾರ ನಡೆದಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮದುವೆಗೂ ಮುನ್ನ ವರದಕ್ಷಿಣೆ ನೀಡಿ ಎಂದು ಪೀಡಿಸುತ್ತಿದ್ದರು, ತಂಗಿ ಚೆನ್ನಾಗಿರಲಿ ಎಂದು 7 ಲಕ್ಷ ರೂ ವರದಕ್ಷಿಣೆ ನೀಡಿದ್ದೇವೆ ಆದರೂ ಕೂಡ ತಂಗಿ ಬಾಳು ಹಾಳಾಯಿತಲ್ಲ ಎಂದು ಸಂತ್ರಸ್ತೆಯ ಅಣ್ಣ ಕಣ್ಣೀರು ಹಾಕಿದ್ದಾರೆ. ಅವರ ಕುಟುಂಬದವರ ಮೇಲೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos