‘ಮಡಿಕೇರಿ’ ರೆಸಾರ್ಟ್ ನಲ್ಲಿ ಬುಕ್ಕಿಂಗ್

‘ಮಡಿಕೇರಿ’ ರೆಸಾರ್ಟ್ ನಲ್ಲಿ ಬುಕ್ಕಿಂಗ್

ಮಡಿಕೇರಿ, ಜು.8 : ಜೆಡಿಎಸ್ ನಿಂದ ರೆಸಾರ್ಟ್ ರಾಜಕೀಯ ಶುರು. ಇಂದು ಸಂಜೆ ವೇಳೆಗೆ ಶಾಸಕರು, ಸಚಿವರು ಮಡಿಕೇರಿಗೆ ಶಿಫ್ಟ್, ರೆಡಿಯಾಗಿದ್ದ, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳ ನಾಯಕರು ಕಸರತ್ತು ಮಾಡುತ್ತಿದ್ದು, ಈ ಹಿನ್ನೆಲೆಯಲ್ಲಿ ಮಡಿಕೇರಿಯ ರೆಸಾರ್ಟಿನಲ್ಲಿ 35 ರೂಂ ಬುಕ್ಕಿಂಗ್ ಮಾಡಿದ್ದಾರೆ.
35 ರೂಂ ಗಳಲ್ಲಿ 10 ವಿಲ್ಲಾ, 15 ಡಿಲೆಕ್ಸ್ ಮತ್ತು 10 ಕಾಟೇಜ್ ರೂಂಗಳು ಬುಕ್ಕಿಂಗ್ ಮಾಡಲಾಗಿದೆ. ರೂಂ ಬುಕ್ಕಿಂಗ್ ಬಗ್ಗೆ ಪ್ಯಾಡಿಂಗ್ ಟನ್ ಹೋಟೆಲ್ ಮ್ಯಾನೇಜರ್ ರಶ್ಮಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ಇಂದು ಸಂಜೆ ವೇಳೆಗೆ ಬರುವುದಾಗಿ ಜೆಡಿಎಸ್ ಮುಖಂಡರು ರೂಂ ಬುಕ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಮೂರು ರಾತ್ರಿ ಉಳಿದುಕೊಳ್ಳಲು ಪ್ಲಾನ್ ಮಾಡಿ ರೂಂ ಬುಕ್ಕಿಂಗ್ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos