ಮಧುಮೇಹಿಗಳ ಆರೋಗ್ಯ ಜೋಪಾನ

ಮಧುಮೇಹಿಗಳ ಆರೋಗ್ಯ ಜೋಪಾನ

ಬೆಂಗಳೂರು, ಸೆ. 5: ಕಳೆದ ವರ್ಷಗಳಿಂದ ಸಕ್ಕರೆ ಕಾಯಿಲೆ ಹೆಚ್ಚಾಗುತ್ತಿದೆ. ಮಧುಮೇಹಿಗಳು ತಮ್ಮ ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಾಕಷ್ಟು ಮುನ್ನೆಚ್ಚರಿಕೆವಹಿಸದಿದ್ದರೆ ಅಪಾಯ ತಪ್ಪಿದ್ದಲ್ಲ. ಮಳೆಗಾಲದಲ್ಲಿ ಮಧುಮೇಹಿಗಳು ಆಹಾರಕ್ರಮದ ಜತೆಗೆ ಪಾದಗಳ ಆರೈಕೆ ಕಡೆಯೂ ಹೆಚ್ಚಿನ ಗಮನ ನೀಡಬೇಕು. ಸುರಿಯುತ್ತಿರುವ ಮಳೆಯಿಂದಾಗಿ ವಾತಾವರಣದಲ್ಲಿ ತೇವಾಂಶ ಅಧಿಕವಾಗಿದೆ. ಮಳೆಗಾಲದ ತೇವ ಮತ್ತು ಆದ್ರ್ರ ವಾತಾವರಣದಲ್ಲಿ ಶಿಲೀಂಧ್ರಗಳು ಮತ್ತು ಸೂಕ್ಷ್ಮಾಣು ಜೀವಿಗಳು ಬಹುಬೇಗ ಬೆಳೆಯುತ್ತವೆ. ತೇವದಿಂದ ಕೂಡಿರುವ ಮತ್ತು ಶುಚಿಗೊಳಿಸದ ಪಾದಗಳು ಈ ಸೂಕ್ಷಾಣು ಜೀವಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಸೂಕ್ತ ಕಾಳಜಿ ವಹಿಸದಿದ್ದಲ್ಲಿ ಪಾದಗಳಲ್ಲಿಸೋಂಕು ಉಂಟಾಗಬಹುದು. ಸಣ್ಣ ಸೋಂಕುಗಳು ಹುಣ್ಣುಗಳಾಗಿ ಸಮಸ್ಯೆ ತೀವ್ರವಾಗಬಹುದು. ನರಕ್ಕೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ಹೀಗಾಗಿ ಮಧುಮೇಹಿಗಳು ಅಧಿಕ ತೇವಾಂಶವಿರುವ ಸಂದರ್ಭದಲ್ಲಿಎಚ್ಚರಿಕೆ ಅಗತ್ಯ.

ಹೀಗೆ ಆರೈಕೆ : ಮಧುಮೇಹಿಗಳು ಪಾದವನ್ನು ಶುಚಿಯಾಗಿಟ್ಟುಕೊಳ್ಳುವುದು ಅಗತ್ಯ. ಹೊರಗೆ ಹೋಗಿ ಬಂದ ನಂತರ ಪಾದವನ್ನು ಕಡ್ಡಾಯವಾಗಿ ಶುಚಿಗೊಳಿಸಬೇಕು. ಮಧುಮೇಹಿಗಳು ಯಾವಾಗಲೂ ಪಾದವನ್ನು ತೇವರಹಿತವಾಗಿಟ್ಟುಕೊಳ್ಳಬೇಕು. ಪಾದಗಳು ಒದ್ದೆಯಾಗಿರದಂತೆ ನೋಡಿಕೊಳ್ಳಬೇಕು. ಹೊರಗಡೆ ಹೆಚ್ಚಾಗಿ ಕೆಲಸ ನಿರ್ವಹಿಸಬೇಕಾದವರು ತಮ್ಮ ಜತೆಯಲ್ಲಿ ಒಂದು ಟವಲ್ನ್ನು ಇಟ್ಟುಕೊಂಡು ಒದ್ದೆಯಾದ ಪಾದಗಳನ್ನು ಕೂಡಲೇ ಒರೆಸಿಕೊಂಡು ತೇವ ರಹಿತವಾಗಿಟ್ಟುಕೊಳ್ಳಬೇಕು. ಕಾಲಿನ ಉಗುರುಗಳನ್ನು ಆಗಾಗ ಕತ್ತರಿಸಿ ಶುಚಿಯಾಗಿಟ್ಟುಕೊಳ್ಳಬೇಕು. ಸಾಮಾನ್ಯವಾಗಿ ಮಧುಮೇಹಿಗಳ ಕಾಲಿನ ಉಗುರುಗಳಲ್ಲಿ ಶಿಲೀಂಧ್ರಗಳಿರುತ್ತವೆ.

ಫ್ರೆಶ್ ನ್ಯೂಸ್

Latest Posts

Featured Videos