ಮಾದಪ್ಪನ ಹುಂಡಿಯಲ್ಲಿ 1.41 ಕೋಟಿ

ಮಾದಪ್ಪನ ಹುಂಡಿಯಲ್ಲಿ 1.41 ಕೋಟಿ

ಹನೂರು, ಅ. 25 : ತಾಲ್ಲೂಕಿನ ಪ್ರಸಿದ್ದ ಯಾತ್ರಸ್ಥಳ ಮಲೈಮಹದೇಶ್ವರಬೆಟ್ಟ ಮಾದಪ್ಪನ ಸನ್ನಿಧಿಯಲ್ಲಿ ಮಲೆಮಹದೇಶ್ವರಸ್ವಾಮಿ ಕ್ಷೇತ್ರ ಪ್ರಾಧಿಕಾರ ವತಿಯಿಂದ ನಡೆದ ಹುಂಡಿಗಳ ಎಣಿಕೆಯಲ್ಲಿ ಈ ಬಾರಿ 1.41 ಕೋಟಿ ರೂ. ಸಂಗ್ರಹವಾಗಿದೆ.

ಆಯುಧ ಪೂಜೆ ಹುಣ್ಣಿಮೆ ಇನ್ನಿತರ ವಿಶೇಷ ದಿನಗಳಲ್ಲಿ ಮಾದಪ್ಪನ ಸನ್ನಿಧಿಗೆ ನೆರೆರಾಜ್ಯ ತಮಿಳು ನಾಡು ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಲಕ್ಷಾಂತರ ಭಕ್ತರು ಹಣ ಚಿನ್ನ ಬೆಳ್ಳಿ ಪದಾರ್ಥಗಳನ್ನು ಹುಂಡಿಯಲ್ಲಿ ಹಾಕಿದ್ದರು. ಆ ಹಿನ್ನೆಲೆಯಲ್ಲಿ ಎಣಿಕೆ ಕಾರ್ಯ ಕೈಗೊಳ್ಳಲಾಗಿತ್ತು. ಹುಂಡಿಯಲ್ಲಿ 1,41,85,474 ಕೋ. ರೂ. ನಗದು 40ಗ್ರಾಂ. ಚಿನ್ನ, ಹಾಗೂ 1 ಕೆಜಿ 891ಗ್ರಾಂ. ಬೆಳ್ಳಿ ಸಂಗ್ರಹವಾಗಿತ್ತು. ಕಳೆದ ತಿಂಗಳು 87,29,104 ಲಕ್ಷ ರೂ. ನಗದು 31 ಗ್ರಾಂ. ಚಿನ್ನ, ಹಾಗೂ 700 ಗ್ರಾಂ. ಬೆಳ್ಳಿ ಸಂಗ್ರವಾಗಿತ್ತು.

 

ಫ್ರೆಶ್ ನ್ಯೂಸ್

Latest Posts

Featured Videos