ಮದಗಜ ನಿಗೆ ಯಾರಾಗುತ್ತಾರೆ ಜೋಡಿ..?

ಮದಗಜ ನಿಗೆ ಯಾರಾಗುತ್ತಾರೆ ಜೋಡಿ..?

ಬೆಂಗಳೂರು, . 8, ನ್ಯೂಸ್ ಎಕ್ಸ್ ಪ್ರೆಸ್ರೋರಿಂಗ್ ಸ್ಟಾರ್ ಶ್ರೀ ಮುರಳಿ ಸದ್ಯ ಭರಾಟೆಯಂತಹ ಪಕ್ಕಾ ಮಾಸ್ ಎಂಟರ್ಟೈನರ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ’ಭರಾಟೆ’ ಚಿತ್ರವು ಬಹುತೇಕ ಕೆಲಸ ಮುಗಿದಿದೆ. ಇದರ ನಡುವೆ ಶ್ರೀ ಮುರಳಿ ನಟನೆಯ ‘ಮದಗಜ’ ಚಿತ್ರವೂ ಸೆಟ್ಟೇರಲು ಸಿದ್ಧತೆ ನಡೆಸುತ್ತಿದೆ.

ಜೂನ್ ತಿಂಗಳಲ್ಲಿ ಮದಗಜ ಶೂಟಿಂಗ್ ಆರಂಭವಾಗ್ತಿದ್ದು, ‘ಮದಗಜ’ನಿಗೆ ನಾಯಕಿ ಹುಡುಕಾಟವೂ ಜೋರಾಗೇ ನಡೀತಿದೆ. ಮದಗಜ ಚಿತ್ರಕ್ಕೆ ಶ್ರೀಮುರುಳಿ ಓಕೆ ಅಂದಾಗಲೇ ನಾಯಕಿ ಯಾರಪ್ಪಾ ಅನ್ನೋ ಚರ್ಚೆ ಶುರುವಾಗಿತ್ತು. ಈ ಲಿಸ್ಟ್ನಲ್ಲಿ ಸದ್ಯ ಡಿಂಪಲ್ ಕ್ವೀನ್ ರಚಿತಾ ರಾಮ್ ಹೆಸರು ಫಸ್ಟ್ ಇದೆ.

ರಥಾವರ ಚಿತ್ರದಲ್ಲಿ ಮುರುಳಿಗೆ ರಚಿತಾ ಜೋಡಿಯಾಗಿದ್ದರು. ಹಾಗೇ ನಟಸಾರ್ವಭೌಮ ಖ್ಯಾತಿಯ ಕ್ಯೂಟ್ ಚೆಲುವೆ ಅನುಪಮಾ ಪರಮೇಶ್ವರ್ ಮತ್ತು ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಹೆಸರು ಕೂಡ ಕೇಳಿಬರುತ್ತಿದ್ದು, ಇಷ್ಟರಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos