ಮಾನವೀತೆ ಮನುಷತ್ವಕ್ಕಿಲ್ಲ ಕಿಮ್ಮತ್ತು!

ಮಾನವೀತೆ ಮನುಷತ್ವಕ್ಕಿಲ್ಲ ಕಿಮ್ಮತ್ತು!

ಯಾವಾಗಲೂ ಮಾನವೀಯ ಸಂಭಂಧಗಳಿಂದ ದೂರ ಉಳಿದಿರುವ ನಗರ ವಾಸಿಗರಲ್ಲಿ ಕ್ರೌರತ್ವ  ದಿನದಿಂದ ದಿನಕ್ಕೆ ಇಮ್ಮಡಿಯಾಗುತ್ತಿದೆ .

ಸರ್ಕಾರಿ ಕಛೇರಿಗಳ ಅಕ್ಕ ಪಕ್ಕದಲ್ಲಿ  ಮಾನವ ಸಂಪತ್ತಿನ ಹರಣವಾಗುತ್ತಿದ್ದರೂ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಶೋಚನೀಯ.

ಇಂದು ಮದ್ಯಾನ 2 ಗಂಟೆ ಸಮಾರಿನಲ್ಲಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳು ಹಾಗು ಜಿಲ್ಲಾಮ್ಯಾಜಿಸ್ಟ್ರೇಟ್ ಕಛೇರಿ ಹಿಭಾಗದಲ್ಲಿ ಅಮಾನವಿಯ ಘಟನೆಯೊಂದು ನಡೆದಿದೆ.

ಹೌದು, ಜಿಲ್ಲಾಧಿಕಾರಿಗಳ ಕಛೇರಿ ಹಿಂಭಾಗದ ಮೆಸ್ ಒಂದರ ಮಾಲೀಕ ಯುವ ಕೂಲಿ ಕಾರ್ಮಿಕನನ್ನ ಮ್ಯಾನ್ ಹೋಲ್ ಒಳಗೆ ಇಳಿಸಿ ಸ್ವಚ್ಚಮಾಡಿಸತ್ತಿರುವ ಘಟನೆ ನಡೆದಿದೆ.

ಅದು ಒಂದು ಸರ್ಕಾರಿ ಕಛೇರಿ ಹಿಂಭಾಗ ಜನನಿಬಿಡ ರಸ್ತೆಯಲ್ಲೇ ಮನುಷ್ಯತ್ವ ಮರೆತು ಮ್ಯಾನ್ ಹೋಲ್ ಗೆ ಇಳಿಸಿರುವು ಅಮಾನವೀಯ ಕೃತ್ಯ.

ಬಾತ್ ರೂಂ ಪಿಟ್ ಹಾಗೂ ಮ್ಯಾನ್ ಹೋಲ್ಗಳಿಗೆ ಕೂಲಿ ಕಾರ್ಮಿಕರನ್ನು ಬಳಸಿ ಸ್ವಚ್ಚಗೊಳಿಸುವಂತಿಲ್ಲ. ಇದು ಕಾನೂನು ಭಾಹೀರ ಆದಾಗ್ಯೂ ಇಂತಹ ಘಟನೆ ರಾಜಧಾನಿ ಬೆಂಗಳರಲ್ಲಿ ನಡೆದಿರುವುದೆ ಅಮಾನವೀತೆಗೆ ಹಿಡಿದ ಕೈಗನ್ನಡಿ.

ಕೂಡಲೇ ಮ್ಯಾನ್ ಸ್ವಚ್ಚತೆಗೆ ಕಾರ್ಮಿಕನನ್ನ ಬಳಿಸಿ ಕೊಂಡು ಸ್ವಚ್ಚ ಮಾಡಿರುವುಕ್ಕೆ  ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos