ಎಂ.ಪಿ. ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ

ಎಂ.ಪಿ. ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ

ಮೈಸೂರು, ಅ. 25: ಸಜ್ಜನ ರಾಜಕಾರಣ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಪುತ್ರಿ ಸುಮಾ ವಿಜಯ್‌ಗೆ ಕೊಲೆ ಬೆದರಿಕೆ ಎದುರಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತವಲಯದಲ್ಲಿದ್ದ ಮಾಜಿ ಶಾಸಕ ಹುಣಸೂರು ಕ್ಷೇತ್ರದ ಉಪಚುನಾವಣೆಯ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಎಂದು ಬಿಂಬಿಸಲ್ಪಟ್ಟಿದ್ದಾರೆ. ಹೀಗಾಗಿ ಕೊಲೆ ಬೆದರಿಕೆ ಪ್ರಕರಣಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಎಂ.ಪಿ.ಪ್ರಕಾಶ್ ಪುತ್ರಿ ಸುಮಾ ವಿಜಯ್ ಮೈಸೂರಿನ ವಿ.ವಿ.ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸುಮಾ ವಿಜಯ್ ಕೊಲೆ ಬೆದರಿಕೆ ಹಾಕಿದ್ದ ಹುಣಸೂರು ಕ್ಷೇತ್ರದ ಉಪಚುನಾವಣೆಯ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಶಾಸಕ ಎಚ್.ಪಿ.ಮಂಜುನಾಥ್. ವಿರುದ್ಧ ಪ್ರಕರಣ ದಾಖಲಾಗಿದೆ.

ನನ್ನ ತಮ್ಮ, ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಎಚ್.ಪಿ.ಮಂಜುನಾಥ್ ಸ್ನೇಹಿತರಾಗಿದ್ದರು. ನನ್ನ ತಮ್ಮ ಮೈಸೂರಿನ ವಿ ವಿ ಮೊಹಲ್ಲಾದಲ್ಲಿ ಪೆಂಟ್ ಹೌಸ್ ಖರೀದಿಸಿದ್ದ. ಸ್ನೇಹಿತರಾಗಿದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಮಂಜುನಾಥ್‌ಗೆ ಬಿಟ್ಟುಕೊಟ್ಟಿದ್ದ. ಆತನ ಮರಣಾನಂತರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ಈಗ ಮನೆ ಖಾಲಿ ಮಾಡುತ್ತಿಲ್ಲ. ಮನೆ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪ ಹೊರಿಸಿ ಸುಮಾ ವಿಜಯ್ ಪೊಲೀಸರಿಗೆ ವಿವರವಾಗಿ ದೂರು ಸಲ್ಲಿಸಿದ್ದಾರೆ.

ಮೂರು ದೂರುಗಳು ದಾಖಲು: ಮನೆ ವಿವಾದಕ್ಕೆ ಸಂಬಂಧಿಸಿ ಈಗಾಗಲೇ ಮೂರು ದೂರುಗಳು ದಾಖಲಾಗಿದ್ದು, ಎಫ್‌ಐಆರ್‌ಗಳು ದಾಖಲಾಗಿವೆ. ಅಲ್ಲದೆ, ಅತಿಕ್ರಮ ಪ್ರವೇಶ ಸಂಬಂಧ ದೂರು- ಪ್ರತಿದೂರು ಕೂಡ ದಾಖಲಾಗಿವೆ.

 

ಫ್ರೆಶ್ ನ್ಯೂಸ್

Latest Posts

Featured Videos