ಇಂದು LSG vs PBKS ಮುಖಾಮುಖಿ

ಇಂದು LSG vs PBKS ಮುಖಾಮುಖಿ

ಬೆಂಗಳೂರು: ಭಾರತದ ಅತ್ಯಂತ ದೊಡ್ಡ ಲೀಕ್ ಎಂದರೆ ಅದು ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಕೀಕೆಟ್‌ ಅಭಿಮಾನಿಗಳು ಕಿಕ್ಕಿರಿದು ಆಚರಿಸುವಂತಹ ಸಂಭ್ರಮವಾಗಿದೆ. ಐಪಿಎಲ್ ಆರಂಭವಾಗಿ ಹತ್ತು ದಿನಗಳಾಗುತ್ತಾ ಬಂದಿದೆ, ಐಪಿಎಲ್ ನಲ್ಲಿ ಒಟ್ಟು ಹತ್ತು ತಂಡಗಳಿವೆ. ಈ ಸೀಸನ್ ನಲ್ಲಿ ಎಲ್ಲಾ ತಂಡಗಳು ತಮ್ಮ ಒಂದೊಂದು ಪಂದ್ಯಗಳನ್ನು ಆಡಿದ್ದು, ಇಂದು 11ನೇ ಪಂಡ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಐಪಿಎಲ್‌ನಲ್ಲಿ ವಿಕೆಟ್ ಕೀಪರ್‌ ಬ್ಯಾಟರ್‌ ಆಗಿಯೇ ಆಡುತ್ತಿರುವ ಲಖನೌ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್‌.ರಾಹುಲ್‌ ತಮ್ಮ ಸ್ಟ್ರೈಕ್‌ರೇಟ್‌ ಹೆಚ್ಚಿಸಿಕೊಳ್ಳುವತ್ತ ಗಮನಹರಿಸಬೇಕಿದೆ. ಮಾರ್ಕ್‌ ವುಡ್‌, ಡೇವಿಡ್‌ ವಿಲ್ಲಿ ಅನುಪಸ್ಥಿತಿಯಲ್ಲಿ ಲಖನೌ ಬೌಲಿಂಗ್‌ ವಿಭಾಗ ಸೊರಗಿದಂತೆ ಕಾಣುತ್ತಿದೆ. ದೇವದತ್‌ ಪಡಿಕ್ಕಲ್‌, ಆಯುಶ್ ಬದೋನಿ, ದೀಪಕ್ ಹೂಡಾ, ಕೃನಾಲ್‌ ಪಾಂಡ್ಯ ಮೇಲೆ ತಂಡಕ್ಕೆ ಹೆಚ್ಚಿನ ನಿರೀಕ್ಷೆಯಿದ್ದು, ಮಾರ್ಕಸ್‌ ಸ್ಟೋಯ್ನಿಸ್‌ ಅಬ್ಬರಿಸಬೇಕಾದ ಅಗತ್ಯವಿದೆ.

ಮತ್ತೊಂದೆಡೆ ಶಿಖರ್‌ ಧವನ್‌ ನಾಯಕತ್ವದ ಪಂಜಾಬ್‌ ವಿದೇಶಿ ತಾರೆಗಳ ಮೇಲೆ ಹೆಚ್ಚಿನ ಭರವಸೆ ಇಟ್ಟುಕೊಂಡಿದೆ. ಸ್ಯಾಮ್‌ ಕರ್ರನ್‌, ಲಿವಿಂಗ್‌ಸ್ಟೋನ್‌, ಕಗಿಸೊ ರಬಾಡ ಜೊತೆ ಜಾನಿ ಬೇರ್‌ಸ್ಟೋವ್‌ ಸುಧಾರಿತ ಪ್ರದರ್ಶನ ನೀಡಬೇಕಿದೆ. ಜಿತೇಶ್‌ ಶರ್ಮಾ, ಪ್ರಭ್‌ಸಿಮ್ರನ್‌, ಶಶಾಂಕ್‌ ಸಿಂಗ್‌ ತಂಡ ತಮ್ಮ ಮೇಲೆ ಇಟ್ಟಿರುವ ನಿರೀಕ್ಷೆ ಉಳಿಸಿಕೊಂಡರಷ್ಟೇ ಮುಂದಿನ ಪಂದ್ಯಗಳಿಗೆ ಅವಕಾಶ ಸಿಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos