‘ಪ್ರೀತಿ ಮಾಡಿ ಮದುವೆಯಾಗಿದ್ದೇನೆ’ : ಶೃತಿ

‘ಪ್ರೀತಿ ಮಾಡಿ ಮದುವೆಯಾಗಿದ್ದೇನೆ’ : ಶೃತಿ

ಬೆಂಗಳೂರು, ಜೂ. 27 : ‘ನಾನು ಪ್ರೀತಿ ಮಾಡಿ ಮದುವೆಯಾಗಿದ್ದೇನೆ. ಅವರ ಮನಸ್ಸು ನೋಡಿ ಪ್ರೀತಿಸಿ ಮದುವೆಯಾಗಿದ್ದಾನೆ. ಅವರು ಸೀರಿಯಲ್‍ಗೆ ಹೋಗುವ ಮೊದಲೇ ನಮ್ಮಿಬ್ಬರ ಮದುವೆಯಾಗಿತ್ತು. ನಾನು ಯಾವುದೇ ಪರಿಹಾರ, ಎಷ್ಟು ಹಣ ಕೊಟ್ಟರು ವಿಚ್ಛೇದನಕ್ಕೆ ಒಪ್ಪಿಕೊಳ್ಳಲ್ಲ ಎಂದು ಕಿರುತೆರೆ ನಟ ರಾಜೇಶ್ ಪತ್ನಿ ಶೃತಿ ಹೇಳಿದರು.  ಇಬ್ಬರ ಮಧ್ಯೆ ಗಲಾಟೆಯಾದಗಿನಿಂದ ನಾನು ಒಬ್ಬಳೆ ಇದ್ದೀನಿ. ಇದುವರೆಗೂ ನನಗೆ ಅವರು ಒಂದು ಬಾರಿಯೂ ಫೋನ್ ಮಾಡಿಲ್ಲ. ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಲಿಲ್ಲ. ಆದರೆ ಅವರ ಕಡೆಯಿಂದ ವಿಚ್ಛೇಧನಕ್ಕೆ ಅಪ್ಲೈ ಮಾಡಿದ್ದಾರೆ. ಆದರೆ ನಾನು ವಿಚ್ಛೇದನ ಕೊಡಲ್ಲ.  ಅವರ ಜೊತೆಯೇ ನಾನು ಬದುಕಬೇಕು ಎಂದರು.

ರಾಜೇಶ್ ಮತ್ತು ಅವರ ಅಮ್ಮ ಪದೇ ಪದೇ ವರದಕ್ಷಿಣೆ ತೆಗೆದುಕೊಂಡು ಬಾ ಎಂದು ಊಟನೂ ಕೊಡದೆ ಕಿರುಕುಳ ಕೊಡುತ್ತಿದ್ದರು. ನೀನು ನಮಗೆ ಏನು ವರದಕ್ಷಿಣೆ ಕೊಟ್ಟಿಲ್ಲ. ನಮ್ಮ ಮನೆಗೆ ಹೊಂದಿಕೊಳ್ಳುತ್ತಿಲ್ಲ. ನನ್ನ ಮಗನಿಗೆ ಎರಡನೇ ಮದುವೆ ಮಾಡಿಸುತ್ತೇನೆ ಎಂದು ಕಿರುಕುಳ ಕೊಡುತ್ತಿದ್ದರು. ನಾನು ಪ್ರೀತಿಸಿ ಮದುವೆಯಾಗಿದ್ದರಿಂದ ನಮ್ಮ ಪೋಷಕರ ಬಳಿ ಏನು ಹೇಳಿಕೊಳ್ಳುತ್ತಿರಲಿಲ್ಲ ಎಂದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos