ಪ್ರೀತಿ ವಿಚಾರ ಮನೆಗಳಿಗೆ ನುಗ್ಗಿ ಪುಂಡರ ಅಟ್ಟಹಾಸ!

ಪ್ರೀತಿ ವಿಚಾರ ಮನೆಗಳಿಗೆ ನುಗ್ಗಿ ಪುಂಡರ ಅಟ್ಟಹಾಸ!

ಬೆಳಗಾವಿ: ಪ್ರೀತಿ ವಿಚಾರ ಮನೆಗಳಿಗೆ ನುಗ್ಗಿ ಪುಂಡರ ದಾಂದಲೆ. 4 ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ದಾಂದಲೆ ನಡೆಸಲಾಗಿದೆ. ಸಿನಿಮೀಯಾ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಪುಂಡರು ಅಟ್ಟಹಾಸ ಮೆರೆದಿದ್ದಾರೆ. ಈ ಘಟನೆ ನಡೆದಿರುವಂಥದ್ದು ಬೆಳಗಾವಿನ ತಾಲೂಕಿನ ನಾವಾಗಿ ಗ್ರಾಮದಲ್ಲಿ ನಿನ್ನೆ ರಾತ್ರಿ ಈ ಪುಂಡರು ದಾಳಿ ನಡೆಸಿದ್ದಾರೆ. ಗ್ರಾಮಕ್ಕೆ ನುಗ್ಗಿದಂತ 30 ಕ್ಕೂ ಹೆಚ್ಚು ಮುಸುಕು ದಾರಿಗಳ ಗ್ಯಾಂಗ್ ನಿಂದ ಅಟ್ಯಾಕ್ ನಡೆಸಲಾಗಿದೆ.

ಈ ಗ್ಯಾಂಗ್ ನಲ್ಲಿ ಸುಮಾರು 30 ಕ್ಕೂ ಹೆಚ್ಚು ಜನರು ಇದ್ರು ಅವರು ಎಲ್ಲರೂ ಕೂಡ ಬಂದೂಕು, ತಲ್ವಾರ್, ರಾಡ್ ತಂದಿದ್ರು 4 ಕ್ಕೂ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿ ಅಟ್ಟಹಾಸ ಮೆರೆದಿದ್ದಾರೆ. ಮನೆ ಮುಂದೆ ನಿಲ್ಲಿಸಿದಂತಹ 3 ಕಾರು, 4 ಬೈಕು ಜಖಂ ಮಾಡಿದ್ದಾರೆ. ಮನೆ ಕಿಟಕಿ, ಗಾಜುಗಳು, ಗೋಡೆಗೆ ಅಂಟಿಸಿದಂತ ಟೈಲ್ಸ್ ಅನ್ನು ಕೂಡ ಪುಡಿ ಪುಡಿ ಮಾಡಿದ್ದಾರೆ. ಮನೆ ಒಳಗೂ ನುಗ್ಗಿ ದಾಂದಲೆ ನಡೆಸಿದ್ದಾರೆ ದುಷ್ಕರ್ಮಿಗಳು.

ಫ್ರೆಶ್ ನ್ಯೂಸ್

Latest Posts

Featured Videos