ಹಿಟ್ & ರನ್ ಕಾಯ್ದೆ ವಿರುದ್ಧ ಲಾರಿ ಮಾಲೀಕರ ಅಕ್ರೋಶ!

ಹಿಟ್ & ರನ್ ಕಾಯ್ದೆ ವಿರುದ್ಧ ಲಾರಿ ಮಾಲೀಕರ ಅಕ್ರೋಶ!

ಬೆಂಗಳೂರು: ಜನವರಿ 17 ರಿಂದ ಕರ್ನಾಟಕದಲ್ಲಿ ರೋಡ್ ಗಿಳಿಯಲ್ಲ ಲಾರಿ. ಹಿಟ್ & ರನ್ ಕಾಯ್ದೆ ವಿರುದ್ಧ ಲಾರಿ ಮಾಲೀಕರು ರೊಚ್ಚಿಗೆದ್ದಿದ್ದಾರೆ. ಜನವರಿ 17 ರಿಂದ ಕರ್ನಾಟಕದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ.  ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದ ಫೆಡರೇಷನ್. ಲಾರಿ ಅಸೋಸಿಯೇಷನ್ ಗೌರವಾಧ್ಯಕ್ಷ ಚೆನ್ನ ರೆಡ್ಡಿ ಹೇಳಿಕೆಯನ್ನು ನೀಡಿದ್ದಾರೆ.

ಕರ್ನಾಟಕದಲ್ಲಿ ಸುಮಾರು 9 ಲಕ್ಷ ಲಕ್ಷದಷ್ಟು ಗೂಡ್ಸ್ ವಾಹನಗಳಿವೆ. ಜನವರಿ 17ನೇ ತಾರೀಖಿನಿಂದ ಕರ್ನಾಟಕದಲ್ಲಿ ಲಾರಿಗಳು ರಸ್ತೆಗೆ ಇಳಿಯುವುದಿಲ್ಲಾ. ನೀರು,  ಹಾಲು,  ತೈಲಾ ಲಾರಿಗಳು ಬಿಟ್ಟು. ಉಳಿದ ಎಲ್ಲಾ ವಾಹನ ರಸ್ತೆ ಇಳಿಯುವುದಿಲ್ಲ, ಉಳಿದಂತೆ ಎಲ್ಲಾ ವಾಹನಗಳು ಕೂಡ ಈ ಒಂದು ಪ್ರತಿಭಟನೆಗೆ ಕೈ ಜೋಡಿಸುತ್ತಾಯಿದೆ. ಅಸೋಸಿಯೇಷನ್ ನಲ್ಲಿ 6 ಲಕ್ಷ ಜನ ಲಾರಿ ಮಾಲೀಕರಿದ್ದಾರೆ. ರಾಜ್ಯದಲ್ಲಿ 15 ಲಕ್ಷ ಜನ ಲಾರಿ ಚಾಲಕರಿದ್ದಾರೆ. ಇವರೆಲ್ಲರೂ ಕೂಡ ಫೆಡ್ರೇಶನಲ್ಲಿರುವ ಸದಸ್ಯರು ಮುಷ್ಕರಕ್ಕೆ ಮುಂದಾಗಿದ್ದಾರೆ. ಹಿಟ್ & ರನ್ ಹೊಸ ಕಾಯ್ದೆ ವಿರುದ್ಧ ರೊಚ್ಚಿಗೆದ್ದ ಲಾರಿ ಚಾಲಕರು.

ಫ್ರೆಶ್ ನ್ಯೂಸ್

Latest Posts

Featured Videos