ಲಂಡನ್ ನಲ್ಲಿ ಸಿಕ್ಕಿಬಿದ್ದ ವಂಚಕ ನೀರವ್ ಮೋದಿ

ಲಂಡನ್ ನಲ್ಲಿ ಸಿಕ್ಕಿಬಿದ್ದ ವಂಚಕ ನೀರವ್ ಮೋದಿ

ಲಂಡನ್, ಮಾ.9, ನ್ಯೂಸ್ ಎಕ್ಸ್ ಪ್ರೆಸ್: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,000 ಕೋಟಿ ರೂ. ವಂಚಿಸಿ ವಿದೇಶಕ್ಕೆ ಒಡಿಹೋಗಿದ್ದ ವಂಚಕ ವಜ್ರ ವ್ಯಾಪಾರಿ ನೀರವ್ ಮೋದಿ ಎಲ್ಲಿದ್ದಾನೆ ಎಂಬ  ಮಾಹಿತಿ ಬಗ್ಗೆ ಗೊಂದಲ-ಅನುಮಾನಗಳಿರುವ ಸಂದರ್ಭದಲ್ಲೇ ಅಚ್ಚರಿಯ ಸಂಗತಿಯೊಂದು ವರದಿಯಾಗಿದೆ.

ನೀರವ್ ಲಂಡನ್ನ ವೆಸ್ಟ್ಎಂಡ್ನಲ್ಲಿ 8 ದಶಲಕ್ಷ ಡಾಲರ್ ಬೇಲೆಬಾಳುವ  ಬಂಗಲೆಯನ್ನು ಖರೀದಿಸಿದ್ಧಾನೆ. ಅಲ್ಲದೇ ಅಲ್ಲೂ ಕೂಡ ವಜ್ರ ವ್ಯಾಪಾರ ಮುಂದುವರಿಸಿದ್ದಾನೆ. ಆರ್ಥಿಕ ಅಪರಾಧಿಯಾಗಿ ದೇಶಭ್ರಷ್ಟ ಆರೋಪಕ್ಕೆ ಗುರಿಯಾಗಿರುವ ನೀರವ್ ಮೋದಿ ಲಂಡನ್ನ ವೆಸ್ಟ್ ಎಂಡ್ ಬೀದಿಗಳಲ್ಲಿ ಒಡಾಡುತ್ತಿರುವುದು ಕಂಡು ಬಂದಿದೆ.

ನೀವು ಲಂಡನ್ನಲ್ಲಿ ಎಷ್ಟು ದಿನ ಇರಲು ಯೋಜನೆ ಮಾಡಿದ್ದಿರಿ, ನಿಮ್ಮ ಬಳಿ ಇರುವ ಹಣದ ಮೊತ್ತ ವೆಷ್ಟು? ನೀವು ಇಲ್ಲಿ ರಾಜಕೀಯ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಪ್ರಶ್ನೆಗಳಿಗೆ ವಜ್ರವ್ಯಾಪಾರಿ ಉತ್ತರ ನೀಡದೆ ಜಾರಿಕೊಂಡ.

ಸದಾ ಸಣ್ಣಗೆ ಶೇವ್ ಮಾಡುತ್ತಿದ್ದ ನೀರವ್ ಮೋದಿ ಮೀಸೆ ಮತ್ತು ಗಡ್ಡಧಾರಿಯಾಗಿರುದರಿಂದ ಗುರುತಿಸುವುದು ಸ್ಪಲ್ಪ ಕಷ್ಟ. ಕಡುವರ್ಣದ ಪ್ಯಾಂಟ್, ಅದರ ಮೇಲೆ ತಿಳಿ ಗುಲಾಬಿ ಬಣ್ಣದ ಅಂಗಿ ಮೇಲೆ ನೀರವ್ 10,000 ಡಾಲರ್ ಮೌಲ್ಯದ ಅತ್ಯಂತ ದುಬಾರಿ ಜಾಕೆಟ್(ಉಷ್ಟ್ರಪಕ್ಷಿಯ ತುಪ್ಪಳದಿಂದ ತಯಾರಿಸಿದ ಕಪ್ಪು ಜರ್ಕಿನ್) ಧರಿಸಿದ್ದ.

ನೀರವ್ ಮೋದಿ ಅತ್ಯಂತ ಪ್ರತಿಷ್ಠಿತ ಮತ್ತು ಐಷಾರಾಮಿ ವೆಸ್ಟ್ಎಂಡ್ ಪ್ರದೇಶದ ಸೊಹೊದಲ್ಲಿ ಹೊಸ ವಜ್ರ ವ್ಯಾಪಾರ ಶುರು ಮಾಡಿದ್ದಾನೆ ಎಂದು ಮಾದ್ಯಮ ವರದಿ ಮಾಡಿದೆ.ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ನೀರವ್ ಮೋದಿ ಮತ್ತು ಆತನ ಸೋದರಮಾವ ಮೆಹುಲ್ ಚೋಕ್ಸಿ ಭಾರತದಿಂದ ಪರಾರಿಯಾಗಿದ್ದರು.

ನೀರವ್ ಲಂಡನ್ ಹಾಗೂ ಮೆಹುಲ್ ಅಂಟಿಗುವಾದಲ್ಲಿ ಇದ್ದಾರೆಂಬ ಬಗ್ಗೆ ಮಾಹಿತಿ ಇತ್ತು. ಈ ಲಂಡನ್ ನಲ್ಲಿ ನೀರವ್ ಇರುವುದು ದಾಖಲೆ ಸಮೇತ ದೃಢಪಟ್ಟಿರುವುದರಿಂದ ಆತನನ್ನು ಭಾರತಕ್ಕ ಕರೆತರವು ಯತ್ನವನ್ನು ಕೇಂದ್ರ ಸರ್ಕಾರ ಮತ್ತಷ್ಟು ತೀವ್ರಗೊಳಿಸಲಿದೆ.

ಫ್ರೆಶ್ ನ್ಯೂಸ್

Latest Posts

Featured Videos