ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ನಟ ರವಿ ಕಿಶನ್

ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ನಟ ರವಿ ಕಿಶನ್

ಲಕ್ನೋ, ಮಾ. 27, ನ್ಯೂಸ್ ಎಕ್ಸ್ ಪ್ರೆಸ್: 2019ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಜನಪ್ರಿಯ ಭೋಜ್ ಪುರಿ ನಟ ರವಿ ಕಿಶನ್ ಅವರು ಘೋಷಿಸಿದ್ದಾರೆ. ಆದರೆ, ಯಾವ ಕ್ಷೇತ್ರದಿಂದ ಎಂಬುದನ್ನು ಸ್ಪಷ್ಟಪಡಿಸಿಲ್ಲ.

ಯಾವ ಕ್ಷೇತ್ರ ಎಂಬುದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಾನು ಸ್ಪರ್ಧೆಗೆ ಸಿದ್ಧ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸಿದ್ದೇನೆ ಎಂದರು. ನರೇಂದ್ರ ಮೋದಿ ಕುರಿತ ‘ತು ಜೀತ್ ಕೇ ಲಿಯೇ ಬನಾ’ ಎಂಬ ಹಾಡನ್ನು ಅರ್ಪಣೆ ಮಾಡಿ ಮಾತನಾಡಿದರು.

2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಪಡೆಡು ಜಾನ್ ಪುರ್ ಕ್ಷೇತ್ರದಿಂದ ಸ್ಪರ್ಧಿಸಿದ ರವಿ ಕಿಶನ್ ಗೆ ಕೇವಲ 4% ಮತಗಳು ಸಿಕ್ಕಿತ್ತು. ನಂತರ ಬಿಜೆಪಿ ಸೇರಿ, ಮೋದಿ ಪರ ಪ್ರಚಾರ ಕೈಗೊಂಡರು.

ಫ್ರೆಶ್ ನ್ಯೂಸ್

Latest Posts

Featured Videos