ಲೋಕಸಭಾ ಚುನಾವಣೆ ಸ್ಪರ್ಧಿಸೋಲ್ಲ: ಮಾಯಾವತಿ

ಲೋಕಸಭಾ ಚುನಾವಣೆ ಸ್ಪರ್ಧಿಸೋಲ್ಲ: ಮಾಯಾವತಿ

ಲಕ್ನೋ, ಮಾ. 20, ನ್ಯೂಸ್ ಎಕ್ಸ್ ಪ್ರೆಸ್: ನಾಯಕಿ ಮಾಯಾವತಿ  ಅವರು ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸೋಲ್ಲ ಎನ್ನುವ ಮೂಲಕ ಅಚ್ಚರಿಯ ಹೇಳಿಕೆ ನೀಡಿದ್ದಾರೆ.

ರಾಜ್ಯಸಭೆ ಮಾಜಿ ಸಂಸದೆ ಮಾಯಾವತಿ ಅವರು ಈ ಬಾರಿ ಲೋಕಸಭಾ ಚುನಾವನೆಗೆ ಸ್ಪರ್ಧಿಸಬಹುದು ಎಂದು ಊಹಿಸಲಾಗಿತ್ತು. ಪ್ರಧಾನಿ ಪಟ್ಟದ ಮೇಲೂ ಕಣ್ಣೀಟ್ಟಿರುವ ಕಾರಣ ಅವರು ಕಣಕ್ಕಿಳಲಿಯುತ್ತಾರೆ ಎಂದು ನೀರೀಕ್ಷಿಸಲಾಗಿತ್ತು. ಆದರೆ ತಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

ಚುನಾವಣೆಗೆ ಸ್ಪರ್ಧಿಸಿದರೆ ತಮ್ಮ ಕ್ಷೇತ್ರದ ಮೇಲೆಯೇ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಅದರಿಂದ ಉಳಿದ ಕ್ಷೇತ್ರಗಳಲ್ಲಿ ಉತ್ತಮ ಪ್ರದರ್ಶನ ನೀಡುವುದಕ್ಕಾಗದೆ ಇರಬಹುದು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವ ಯೋಚನೆ ಇಲ್ಲ ಎಂದು ಈ ಮೊದಲೂ ಒಮ್ಮೆ ಮಾಯಾವತಿ ಹೇಳಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos