ಲೋಕಸಭಾ ಕ್ಷೇತ್ರಕ್ಕೆ 80 ಸಾವಿರ ಭದ್ರತಾ ಸಿಬ್ಬಂದಿ

ಲೋಕಸಭಾ ಕ್ಷೇತ್ರಕ್ಕೆ 80 ಸಾವಿರ ಭದ್ರತಾ ಸಿಬ್ಬಂದಿ

ರಾಯಪುರ ಏ. 11, ನ್ಯೂಸ್ ಎಕ್ಸ್ ಪ್ರೆಸ್: ಛತ್ತೀಸ್ ಗಢದ ಬಸ್ತರ್ ಲೋಕಸಭಾ ಕ್ಷೇತ್ರಕ್ಕೆ ಬಿಗಿ ಭದ್ರತೆಯ ನಡುವೆ ಇಂದು ಮತದಾನ ಆರಂಭವಾಗಿದ್ದು, ಚುನಾವಣೆ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆಯುವಂತೆ ಸಕಲ ಭದ್ರತಾ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಒಟ್ಟು 80 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ನಕ್ಸಲೀಯರು ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ ಜನ ಮತಗಟ್ಟೆಗಳಿಗೆ ಉತ್ಸಾಹದಿಂದ ಹೋಗುತ್ತಿದ್ದಾರೆ.

ಛತ್ತೀಸ್ ಗಢದ ಏಕೈಕ ಕ್ಷೇತ್ರದಲ್ಲಿ 1 ಹಂತದಲ್ಲಿ ಮತದಾನ ನಡೆಯುತ್ತಿದೆ. ನಕ್ಸಲ್ ದಾಳಿಯಲ್ಲಿ ಬಿಜೆಪಿ ಶಾಸಕ ಭೀಮಾ ಮಾಂಡವಿ ಮತ್ತು 4 ಪೊಲೀಸರು ಜೀವ ಕಳೆದುಕೊಂಡಿದ್ದರು.

“ಬಸ್ತರ್ನಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ಎಲ್ಲ ವ್ಯವಸ್ಥೆ ಮಾಡಿಕೊಳ್ಳಲಾಗಿದೆ” ಎಂದು ಛತ್ತೀಸ್ಗಢದ ಮುಖ್ಯ ಚುನಾವಣಾ ಅಧಿಕಾರಿ ಪ್ರಕಟಿಸಿದ್ದಾರೆ. 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಳ್ಳುವ ಈ ಕ್ಷೇತ್ರಕ್ಕೆ 7 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ದಂತೇವಾಡ, ಕೊಂಟ, ಬಿಜಪುರ ಮತ್ತು ನಾರಾಯಣಪುರದಲ್ಲಿ ಬೆಳಿಗ್ಗೆ 7ಕ್ಕೆ ಆರಂಭವಾದ ಮತದಾನ ಮಧ್ಯಾಹ್ನ 3ರವರೆಗೆ ನಡೆಯಲಿದೆ. ಉಳಿದಂತೆ ಬಸ್ತರ್, ಚಿತ್ರಕೂಟ, ಕೊಂಡಗಾಂವ್ ಮತ್ತು ಜಗದಾಳಪುರದಲ್ಲಿ ಸಂಜೆ 5ರವರೆಗೆ ಮತದಾನ ಇರುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos