ಲೋಕಸಭೆ: “ಉತ್ತಮ ಪ್ರಜಾಕೀಯ ಪಕ್ಷ 28 ಕ್ಷೇತ್ರಗಳಲ್ಲಿ ಸ್ಪರ್ಧೆ”

ಲೋಕಸಭೆ: “ಉತ್ತಮ ಪ್ರಜಾಕೀಯ ಪಕ್ಷ 28 ಕ್ಷೇತ್ರಗಳಲ್ಲಿ ಸ್ಪರ್ಧೆ”

ಬೆಂಗಳೂರು, ಮಾ.9,ನ್ಯೂಸ್ ಎಕ್ಸ್ ಪ್ರೆಸ್: ಮುಂದೆ ನೆಡೆಯಲಿರುವ ಲೋಕಸಭೆ ಚುನಾವಣೆಗೆ ಈಗಾಗಲೇ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸಿದ್ದು, ಪ್ರಜಾಕೀಯಾ ಪಕ್ಷವೂ ಕೂಡ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ,ನಟ ಉಪೇಂದ್ರ ರವರು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉಪೇಂದ್ರ ಅವರು, ಉತ್ತಮ ಪ್ರಜಾಕೀಯ ಪಕ್ಷವು 28 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಲಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ಮೌಖಿಕ ಮತ್ತು ಬರವಣಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗಿದ್ದು, ಚುನಾವಣಾ ಪ್ರಚಾರಕ್ಕಾಗಿ ಅಭ್ಯರ್ಥಿಗಳೊಂದಿಗೆ ರಾಜ್ಯ ಪ್ರವಾಸ ಮಾಡುವುದಾಗಿ ಹೇಳಿದರು.

ಇನ್ನು ಅಭ್ಯರ್ಥಿಗಳು ತಮ್ಮ ಅಭಿವೃದ್ಧಿ ಕಾರ್ಯಗಳ ಯೋಜನೆಗಳನ್ನು ವಿಡಿಯೋ ಮಾಡಿ ಅದನ್ನು ಪ್ರಜಾಕೀಯ ವೆಬ್ ಸೈಟ್ ಗೆ ಕಳುಹಿಸಿಕೊಡಬೇಕು. ಅದನ್ನು ಯುಪಿಪಿಯಲ್ಲಿರುವ ಸೇವಕರು ಚರ್ಚಿಸಿ, ನಂತರ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಯುಪಿಪಿಯಿಂದ ಲಿಖಿತ ಪರೀಕ್ಷೆ ಸಹ ಇರಲಿದೆ. ಆ ಲಿಖಿತ ಪರೀಕ್ಷೆ ಪಾಸಾದವರಿಗೆ ಮಾತ್ರ ತಮ್ಮ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂದು ಉಪೇಂದ್ರ ಅವರು ವಿವರಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos