ಲೋಕಪಾಲ್ ಆಯ್ಕೆ ಸಮಿತಿಗೆ ಹೋಗಲ್ಲ; ಕೇಂದ್ರದ ವಿರುದ್ಧ ಖರ್ಗೆ ಕಿಡಿ

ಲೋಕಪಾಲ್ ಆಯ್ಕೆ ಸಮಿತಿಗೆ ಹೋಗಲ್ಲ; ಕೇಂದ್ರದ ವಿರುದ್ಧ ಖರ್ಗೆ ಕಿಡಿ

ನವದೆಹಲಿ, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಇಂದು ನಡೆಯುವ ಲೋಕಪಾಲ್ ಆಯ್ಕೆ ಸಮಿತಿ ಸಭೆಗೆ ನಾನು ಹಾಜರಾಗುವುದಿಲ್ಲ ಎಂದು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

ಲೋಕಪಲ್​ ಆಯ್ಕೆ ಸಮಿತಿಗೆ ನನ್ನನ್ನು ವಿಶೇಷ ಆಹ್ವಾನಿತನನ್ನಾಗಿ ಕರೆಯಲಾಗಿದೆ. ಆದರೆ ವಿಶೇಷ ಆಹ್ವಾನಿತರಿಗೆ ಲೋಕಪಾಲ್​ ಆಯ್ಕೆ ಪ್ರಕ್ರಿಯೆಯಲ್ಲಿ ಯಾವುದೇ ಅಧಿಕಾರವಿಲ್ಲ. ಇಂತಹ ಗಂಭೀರ ಸಂಗತಿಯಲ್ಲಿ ಪ್ರತಿಪಕ್ಷದ ಧ್ವನಿ ಕಿತ್ತುಕೊಂಡಿರುವುದನ್ನು ನಾನು ಖಂಡಿಸುತ್ತೇವೆ ಎಂದು ಆಕ್ರೋಶ  ವ್ಯಕ್ತಪಡಿಸಿದ್ದಾರೆ.

2014ರಿಂದಲೂ  ಕೇಂದ್ರ ಸರ್ಕಾರ ಲೋಕಪಾಲ್​ರನ್ನು ನೇಮಿಸುವ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಕಾಯ್ದೆಗೆ  ಅಗತ್ಯ ತಿದ್ದುಪಡಿ ತರುವ ಸಣ್ಣ ಪ್ರಯತ್ನವನ್ನೂ ಮಾಡಿಲ್ಲ ಎಂದು ಕೇಂದ್ರದ ವಿರುದ್ಧ ಗುಡುಗಿದರು.

ಲೋಕಪಾಲ್​ ಆಯ್ಕೆ ಸಮಿತಿಯನ್ನು ಸುಪ್ರೀಂಕೋರ್ಟ್​ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್​ ದೇಸಾಯಿ ಅವರ ನೇತೃತ್ವದಲ್ಲಿ ಕಳೆದ ವರ್ಷ ರಚನೆ ಮಾಡಲಾಗಿದೆ.  ಮಾರ್ಚ್​ 7ರಂದು ಕೇಂದ್ರ ಸರ್ಕಾರ ಎಂದು ಆಯ್ಕೆ ಸಮಿತಿ ಸಭೆ ನಡೆಸುತ್ತೆ ಎಂಬುದನ್ನು ಇನ್ನು 10 ದಿನಗಳಲ್ಲಿ ತಿಳಿಸಬೇಕು ಎಂದು ಹೇಳಿತ್ತು. ಅದರಂತೆ ಇಂದು ಸಭೆ  ನಡೆಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos