ಲಾಕ್ ಡೌನ್ ಹಿನ್ನಲೆ ಸೋಂಕಿತರು ಪಟ್ಟಿ

ಲಾಕ್ ಡೌನ್ ಹಿನ್ನಲೆ ಸೋಂಕಿತರು ಪಟ್ಟಿ

ಬೆಂಗಳೂರು, ಮೇ . 13 :  ಲಾಕ್ ಡೌನ್  ಹಿನ್ನಲೆ ಮಾರ್ಚ್ 25 ರಿಂದ ಏಪ್ರಿಲ್ 17 ರವರೆಗೆ. ಈ ಲಾಕ್ ಡೌನ್ ಆರಂಭವಾಗುವಾಗ ಸೋಂಕಿತರ ಸಂಖ್ಯೆ 657 ಇತ್ತು. ಮುಕ್ತಾಯದ ವೇಳೆಗೆ ಸೋಂಕಿತರ ಸಂಖ್ಯೆ 11487 ತಲುಪಿತ್ತು. ಅಂದರೆ 10,830 ಹೊಸ ಸೋಂಕಿತರು ಸೇರ್ಪಡೆಯಾಗಿದ್ದರು. ಲಾಕ್ ಡೌನ್ ಏಪ್ರಿಲ್ 15 ರಿಂದ ಮೇ 3 ರವರೆಗೆ. ಈ ಅವಧಿ ಆರಂಭವಾಗುವಾಗ ಸೋಂಕಿತರ ಸಂಖ್ಯೆ 12370 ಇತ್ತು. ಮುಕ್ತಾಯದ ವೇಳೆಗೆ 42505 ಆಗಿತ್ತು. ಅಂದರೆ ಈ ಅವಧಿಯಲ್ಲಿ ಒಟ್ಟಾರೆ ಹೊಸದಾಗಿ 30135 ಜನ ಸೋಂಕಿತರಾಗಿದ್ದರು.

ಲಾಕ್ ಡೌನ್ ಮೇ 4 ರಿಂದ 17 ರವರೆಗೆ ಇದು ಮುಂದುವರಿಯಲಿದೆ. ಈಗಾಗಲೇ ಈ ಪೈಕಿ ಎಂಟು ದಿನ ಕಳೆದುಹೋಗಿದೆ. 42643 ಇದ್ದ ಸೋಂಕಿತರ ಸಂಖ್ಯೆ ಈ ಎಂಟು ದಿನದಲ್ಲಿ 70 ಸಾವಿರದ ಗಡಿ ತಲುಪಿದೆ. ಈ ಲಾಕ್ ಡೌನ್ ಅವಧಿ ಮುಗಿಯುವ ವೇಳೆಗೆ ಅದು 1 ಲಕ್ಷ ತಲುಪಿದರೂ ಆಶ್ಚರ್ಯವೆವಿಲ್ಲ  ಈ ಅಂಕಿ ಅಂಶ ನೋಡಿದ ಮೇಲಾದರೂ ಕೇವಲ ಲಾಕ್ ಡೌನ್ ಒಂದೇ ಕೊರೋನಾ ನಿಯಂತ್ರಿಸಲು ಸಾಧ್ಯವಿಲ್ಲ. ನಾವು ಎಚ್ಚರಿಕೆಯಿಂದಿರುವುದು ಮುಖ್ಯ  ಎನ್ನುವುದು ಸ್ಪಷ್ಟವಾಗುತ್ತದೆ.

 

ಫ್ರೆಶ್ ನ್ಯೂಸ್

Latest Posts

Featured Videos