ಲವ್ವಿ ಡವ್ವಿ ನಡೆಸಿ ಸಾವಿಗೆ ಶರಣಾದ ಯುವತಿ

ಲವ್ವಿ ಡವ್ವಿ ನಡೆಸಿ ಸಾವಿಗೆ ಶರಣಾದ ಯುವತಿ

ವಿಜಯಪುರ, ಸೆ. 19 : ಪ್ರಿಯಕರನೊಬ್ಬ ಹುಡುಗಿ ಜತೆಗಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಕ್ಕೆ ಮನನೊಂದು ಪ್ರೇಯಸಿಯೊಬ್ಬಳು ತನ್ನ ಪ್ರಾಣ ಕಳೆದುಕೊಂಡ ಘಟನೆ ವಿಜಯಪುರದಲ್ಲಿ ನಡೆದಿದೆ.
ಕಾಲೇಜ್ ಒದುತ್ತಿದ್ದಾಗ ಪರಿಚಯವಾಗಿದ್ದ ಶಿವಾನಂದ್ ಎಂಬಾತನನ್ನ ಸುಧಾರಾಣಿ ಪರಿಚಯ ಮಾಡಿಕೊಂಡಿದ್ದಳು. ಪರಿಚಯ ಲವ್ವಿ ಡವ್ವಿ ತಿರುಗಿತ್ತು. ಶಿವಾನಂದನು ತನ್ನ ಗೆಳತಿ ಸುಧಾರಾಣಿ ಜತೆಗಿರೋ ಫೋಟೋವನ್ನು ಪೇಸ್ ಬುಕ್ ನಲ್ಲಿ ಹರಿಬಿಟ್ಟಿರುವ ಹಿನ್ನಲೆ ಮನನೊಂದ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಸುಧಾರಾಣಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಕೆರೂಟಗಿ ಗ್ರಾಮದ ಶಿವಾನಂದನ ವಿರುದ್ಧ ಮೃತ ಸುಧಾರಾಣಿ ಪೋಷಕರು ದೂರು ದಾಖಲು ಮಾಡಿದ್ದು, ವಿಜಯಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.

ಫ್ರೆಶ್ ನ್ಯೂಸ್

Latest Posts

Featured Videos