ಬದುಕಿಗೆ ಹತ್ತಿರದ ಶಿಕ್ಷಣ ನೀಡಬೇಕಾಗಿದೆ

ಬದುಕಿಗೆ ಹತ್ತಿರದ ಶಿಕ್ಷಣ ನೀಡಬೇಕಾಗಿದೆ

ಧಾರವಾಡ, ಜ. 25: ಧಾರವಾಡ ಜಿಲ್ಲೆಯ  ಕಲಘಟಗಿ ತಾಲೂಕಿನ ಧುಮ್ಮವಾಡ ಗ್ರಾಮದ ಸರಕಾರಿ ಮಾದರಿ ಕೇಂದ್ರ ಶಾಲೆ ಹಾಗೂ ಶ್ರೀ ಬೂದನಗುಡ್ಡ ಬಸವೇಶ್ವರ ಪ್ರೌಢ ಶಾಲೆಯ ಹಳೆ ವಿದ್ಯಾರ್ಥಿಗಳ ಸಂಘದಿಂದ ಗುರುವಂದನೆ ಕಾರ್ಯಕ್ರಮ ಇಂದು ಹಮ್ಮಿಕೊಳ್ಳಲಾಗಿತ್ತು.

ಗುರುವಂದನೆ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ ಎಸ್.ಜಿ.ಕುನಕಿಕೋಪ್ಪ ಮಾತನಾಡಿ, ನಾವು ಹಳ್ಳಿಯ ಒಡನಾಟದಲ್ಲಿ ಬೆಳೆದವರು ನಾವು ಶಿಕ್ಷಣ ನೀಡುವುದಷ್ಟೇ ಮಾಡುತ್ತೇವೆ. ಆದರೆ, ಅದು ಅವರ ಭವಿಷ್ಯಕ್ಕೆ ಎಷ್ಟು ಪ್ರಯೋಜನ ಎಂಬುದನ್ನು ತಿಳಿಯಬೇಕಾಗಿದೆ. ಹಳ್ಳಿಯ ವಿದ್ಯಾರ್ಥಿಗಳು ಶಿಕ್ಷಕರನ್ನು ಬಹಳ ಗೌರವಿಸುತ್ತಾರೆ ನಮ್ಮ ಹಳೆಯ ವಿದ್ಯಾರ್ಥಿಗಳು ಬಹು ಕೌಶಲ್ಯ ಹೊಂದಿದವರು ಗುರುವನ್ನು ಎಂದು ಮರೆಯುವುದಿಲ್ಲ ಎಂದು ಹಳೆಯ ವಿದ್ಯಾರ್ಥಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇನ್ನೂ ಕಾರ್ಯಕ್ರಮದಲ್ಲಿ ಎಲ್ಲ ಶಿಕ್ಷಕರಿಗೆ ಸನ್ಮಾನ ಮಾಡಿ, ಅವರಿಂದ ಹಾಡು, ಕಥೆ ಹೇಳಿಸಿದರು. ಎಲ್ಲ ಶಿಕ್ಷಕರಿಗೆ ಕಾಣಿಕೆ ನೀಡಿ ಗೌರವನಮನ ಸಲ್ಲಿಸಿದ ವಿದ್ಯಾರ್ಥಿಗಳು ನೀವು ನಮ್ಮ ಶಿಕ್ಷಕರು ನಿಮ್ಮ ಆಶಿರ್ವಾದ ಸದಾ ಇರಬೇಕು ಎಂದು ಆರ್ಶಿವಾದ ಪಡೆದರು.

ಕಾರ್ಯಕ್ರಮದಲ್ಲಿ ಹಿರಿಯ ಶಿಕ್ಷಕರಾದ ವಾಯ್. ಆರ್.ಮಸಗಿ, ಎಸ್.ಬಿ ಅಕ್ಕಿ, ವಿ.ಎ.ಭೋರ್ಜಿಸ್, ವಿ.ಬಿ. ಸೋಮಣ್ಣವರ, ಜಿ.ಬಿ.ಶೆಟ್ಟರ್ ಸೇರಿದಂತೆ ಎಲ್ಲ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos