ಲಿಂಗಸ್ಗೂರು: ಬಿಸಿಯೂಟ ನೌಕರರ ತಾಲೂಕು ಅಧ್ಯಯನ ಶಿಬಿರ

ಲಿಂಗಸ್ಗೂರು: ಬಿಸಿಯೂಟ ನೌಕರರ ತಾಲೂಕು ಅಧ್ಯಯನ ಶಿಬಿರ

ಲಿಂಗಸ್ಗೂರು(ರಾಯಚೂರು), ಮಾ.2, ನ್ಯೂಸ್‍ ಎಕ್ಸ್ ಪ್ರೆಸ್‍: ಬಿಸಿಯೂಟ ಕಾರ್ಮಿಕರು ತಮ್ಮ ಬದುಕನ್ನು ಉತ್ತಮ ಪಡಿಸಿಕೊಳ್ಳಬೇಕಿದ್ದರೆ ಇಂದಿನ ರಾಜಕಾರಣವನ್ನು ಅರ್ಥಮಾಡಿಕೊಳ್ಳುವುದು ಅಗತ್ಯ ಎಂದು ಅಕ್ಷರ ದಾಸೋಹ ನೌಕರರ ಸಂಘದ(ಸಿಐಟಿಯು ಸಂಯೋಜಿತ)  ರಾಜ್ಯ ಉಪಾಧ್ಯಕ್ಷ ಮಹೇಶ್‍ ಹಿರೇಮಠ್ ಹೇಳಿದ್ದಾರೆ.

ಇಂದು ಲಿಂಗಸ್ಗೂರು ತಾಲೂಕಿನ ಗುರಗುಂಟಾದ ಅಮರೇಶ್ವರದಲ್ಲಿ ನಡೆಯುತ್ತಿರುವ ತಾಲೂಕ ಮಟ್ಟದ ಅಧ್ಯಯನ ಶಿಬಿರವನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜಕಾರಣಿಗಳು ಚುನಾವಣೆಯ ಸಂದರ್ಭದಲ್ಲಿ ನಮ್ಮ ಮಹಿಳೆಯರ ಬಗ್ಗೆ ಅನುಕಂಪ ಹುಟ್ಟಿಸುವ ಮತ್ತು ಬಣ್ಣದ ಮಾತುಗಳನ್ನಾಡುತ್ತಾರೆ. ಆದರೆ ಅಧಿಕಾರಕ್ಕೆ ಬಂದಾಗ ಇಡೀ ಯೋಜನೆಯನ್ನು ಖಾಸಗಿಕರಿಸುವ ಸಂಚುಗಳನ್ನು ರೂಪಿಸುತ್ತಾರೆ. ಅಲ್ಲದೆ ಗೌರವ ಧನವನ್ನು ಹೆಚ್ಚಿಸುವ ಬಗ್ಗೆ ಮಾತಾನಾಡುವುದಿಲ್ಲ. ಆದರೆ ತಮ್ಮ ವೇತನ ಹೆಚ್ಚಿಸಿಕೊಳ್ಳುವಾಗ ಯಾವ ವಿರೋಧವನ್ನು ಮಾಡುವುದಿಲ್ಲ. ಆದರೆ ಬಿಸಿಯೂಟ ನೌಕರರ ಗೌರವ ಧನ ಹೆಚ್ಚಳ ಮಾಡಬೇಕು ಎಂದಾಗ ಇವರುಗಳು ಬಾಯಿ ಬಿಚ್ಚುವುದಿಲ್ಲ. ಹೀಗಾಗಿ ಚುನಾವಣೆ ಸಂದರ್ಭದಲ್ಲಿ ಈ ಎಲ್ಲಾ ಅಂಶಗಳನ್ನು ಗಮನಿಸಿ ದುಡಿಯುವ ಜನರ ಹಿತ ಕಾಪಾಡುವ ಪಕ್ಷಕ್ಕೆ ವೋಟ್‍ ನೀಡಬೇಕು ಎಂದು ಹೇಳಿದರು.

ಇವತ್ತು ಅಡುಗೆ ಕೆಲಸ ಮಾಡುವ ಮಹಿಳೆಯರು ಸಂಕಷ್ಟದ ಬದುಕು ನಡೆಸುತಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ಗಗನದೆತ್ತರಕ್ಕೇರುತ್ತಿವೆ. ಆದರೆ ಅಡುಗೆ ನೌಕರರ ವೇತನ ಹೆಚ್ಚಳವಾಗುತ್ತಿಲ್ಲ. ಆದರೆ ದೊಡ್ಡ ದೊಡ್ಡ ವ್ಯಾಪಾರೋಧ್ಯಮಿಗಳು ಕಟ್ಟಬೇಕಾದ ತೆರಿಗೆ ಮನ್ನವಾಗುತ್ತೆ. ಕೋಟಿಗಟ್ಟಲೆ ಕಟ್ಟಬೇಕಾದ ಸಾಲ ವಸೂಲು ಮಾಡದೆ ಅವರನ್ನು ದೇಶಬಿಟ್ಟು ಹೋಗಲು ಅನುವು ಮಾಡಿಕೊಡಲಾಗುತ್ತದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಆದ್ದರಿಂದ ಈ ನಮ್ಮನ್ನಾಳುತ್ತಿರುವ ಕಾರ್ಮಿಕ ವಿರೋಧಿಗಳ ನಿಜವಾದ ಬಣ್ಣಗಳನ್ನು ಅರ್ಥ ಮಾಡಿಕೊಂಡು ಚುನಾವಣೆಗಳಲ್ಲಿ ಪಾಠ ಕಲಿಸಿದಾಗ ಮಾತ್ರ ನಾವು ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ಎಂದರು.

ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಶೇಕ್ಷಾಖಾದ್ರಿ ಮಾತನಾಡಿ, ಮೋದಿ ಸರ್ಕಾರ ಕಾರ್ಮಿಕರ ಹಕ್ಕುಗಳನ್ನು ದಮನ ಮಾಡಿ ಕಾರ್ಮಿಕರ ಬೆನ್ನು ಮೂಳೆ ಮುರಿಯುತ್ತಿದೆ ಎಂದು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.

ಬಿಸಿಯೂಟ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಕಾರ್ಯದರ್ಶಿ ಎಂ.ಸಿ.ನಿಂಗಪ್ಪ, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಗೌರವಾಧ್ಯಕ್ಷ ಮಹಮ್ಮದ್ ಹನೀಫ್, ತಾಲೂಕಾಧ್ಯಕ್ಷೆ ಅಕ್ಕಮಹಾದೇವಿ, ಮುಖಂಡರಾದ. ಅಭಿದಾ ಬೇಗಂ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos