ಜಲಪಾತದಂತೆ ಆದರೆ, ಜಲಪಾತವಲ್ಲ

ಜಲಪಾತದಂತೆ ಆದರೆ, ಜಲಪಾತವಲ್ಲ

ನ. 27 : ಕಣ್ಮನ ಸೆಳೆಯುವ ನೋಟ… ನೋಡಿದ ಅರೆಕ್ಷಣದಲ್ಲಿಯೇ ಮನಸ್ಸು ಹಕ್ಕಿಯಂತೆ ಹಾರುತ್ತದೆ… ಅಂತಹ ಮನಮೋಹಕ ದೃಶ್ಯವಿದು… ತಕ್ಷಣಕ್ಕೆ ನೀರು ಹಾಲ್ನೊರೆಯುನ್ನುಕ್ಕಿಸಿ ಧುಮ್ಮಿಕ್ಕುವಂತೆ ಕಾಣುತ್ತದೆ… ಆದರೆ, ನಿಜವಾಗಿಯೂ ಇದು ಜಲಪಾತವೇ ಅಲ್ಲ…! ನಮ್ಮ ಕಣ್ಣನ್ನೇ ನಂಬದಂತೆ ಮಾಡುವ ಇಂತಹ ಅದ್ಭುತ ದೃಶ್ಯ ಸೆರೆಯಾಗಿದ್ದು ಮಿಜೋರಾಂನ ಐಜಾಲ್ ನಗರದಲ್ಲಿ. ಮಿಜೋರಾಂ ಪ್ರಕೃತಿಯ ರಮಣೀಯ ತಾಣಗಳಲ್ಲಿ ಒಂದು. ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡುವುದೆಂದರೆ ಕಣ್ಣಿಗದು ಹಬ್ಬ. ಇದೇ ಬೆಟ್ಟದ ನಡುವೆ ಕಂಡದ್ದು ಈ ಜಲಪಾತದಂತಹ ದೃಶ್ಯ. ಆದರೆ, ಎಲ್ಲರನ್ನೂ ಮೋಡಿ ಮಾಡಿರುವ ಈ ದೃಶ್ಯ ಜಲಪಾತದಲ್ಲ, ಬದಲಾಗಿ ಮೋಡಗಳದ್ದು…!
ನಿಜ, ಇಲ್ಲಿ ಮೋಡಗಳು ಜಲಪಾತದಂತೆ ಕಾಣಿಸಿದೆ. ಬೆಟ್ಟದ ನಡುವೆ ಜಲಪಾತವೇ ಧುಮ್ಮಿಕ್ಕುತ್ತಿದೆ ಎಂದು ಭಾಸವಾಗುವಂತೆ ಮೋಡ ಇಲ್ಲಿ ರುದ್ರರಮಣೀಯ ದೃಶ್ಯವನ್ನು ಸೃಷ್ಟಿಸಿದೆ. ಈ ಮೋಡದ ದೃಶ್ಯ ಈಗ ಎಲ್ಲರನ್ನೂ ಬೆರಗುಗೊಳಿಸಿದೆ. ಪರ್ವತ ವಿಜ್ಞಾನದಲ್ಲಿ ಇದನ್ನು `ಒರೊಗ್ರಾಫಿಕ್ ಕ್ಲೌಡ್ಸ್’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಇದನ್ನು `ಜಲಪಾತದ ಮೋಡ’ಗಳು ಎಂದೂ ಗುರುತಿಸಲಾಗುತ್ತದೆ. ಪರ್ವತ ಪ್ರದೇಶದ ತೇವಾಂಶಯುಕ್ತ ಗಾಳಿಯಿಂದ ಮೋಡಗಳು ಇಲ್ಲಿ ಜಲಪಾತದಂತೆ ಕಾಣುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos