ಕೋಮು ಸಾಮರಸ್ಯಕ್ಕೆ ಒಂದಾಗೊಣ

ಕೋಮು ಸಾಮರಸ್ಯಕ್ಕೆ ಒಂದಾಗೊಣ

ಬೆಂಗಳೂರು, ಅ. 2: ಗಾಂಧಿ ಯಾವ ಸ್ಥಾನ ಮಾನಕ್ಕೆ ಆಸೆ ಪಡೆಯಲಿಲ್ಲ ಈ ದೇಶ ಒಂದಾಗಿ ಕೋಮು ಸಾಮರಸ್ಯ ತರಬೇಕು ಅನ್ನುವುದು ಅವರ ಬಯಕೆಯಾಗಿತ್ತು. ಶೋಷಣೆ, ಅಸ್ಪೃಶ್ಯತೆ ಹೋಗಲಾಡಿಸಬೇಕು ಅಂತ ಕನಸು ಕಂಡಿದ್ದರು ಎಂದು ದಿನೇಶ್ ಗುಂಡೂರಾವ್ ಹೇಳಿದರು.

ಮಹಾತ್ಮ ಗಾಂಧಿಯವರ ಜಯಂತಿ ಅಂಗವಾಗಿ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಸದ್ಭಾವನಾ ಯಾತ್ರೆಯಲ್ಲಿ ಮಾತನಾಡಿ, ನಾವು ಯಾರ ಅಡಿಯಲ್ಲಿಯೂ ಬದುಕಬಾರದು ನಾವು ಸ್ವತಂತ್ರ ವಾಗಿ ಬದುಕಬೇಕು ಎನ್ನವುದು ಅವರ ಕನಸಾಗಿತ್ತು. ಇಡಿ ದೇಶದ ಜನರು ಅವರನ್ನು ನಾಯಕತ್ವ ವಹಿಸಿಕೊಳ್ಳುವಂತೆ ಒತ್ತಾಯ ಮಾಡಿದರು.

ಕರ್ನಾಟಕಕ್ಕೂ ಗಾಂಧಿ ಬಂದಿದ್ದರು ಅವರ ನೆನಪುಗಳು ಸ್ಮಾರಕಗಳಾಗಿ ಇನ್ನೂ ಇವೆ. ಅವರು ದೇಶವನ್ನೇ ಪರಿವರ್ತನೆ ಮಾಡುವ ಕೆಲಸ ಮಾಡಿದರು. ಅಸಹಕಾರ ಚಳುವಳಿ ಮೂಲಕ ಬ್ರಿಟೀಷರ ವಿರುದ್ಧ ಚಳುವಳಿಗಳ ಸಮರ ಸಾರಿದರು.

ಆಗಲೂ ಮಹಾತ್ಮಾ ಗಾಂಧಿಯನ್ನು ವಿರೋಧಿಸಿದ್ದರು. ಆರ್ ಎಸ್ ಎಸ್, ಹಿಂದೂ ಸಂಘಟನೆಗಳು ಭಾಗಿಯಾಗಲಿಲ್ಲ. ಅನೇಕ ಸಂದರ್ಭದಲ್ಲಿ ಅವರು ಬ್ರಿಟಿಷರ ಜೊತೆ ಸೇರಿಕೊಂಡಿದ್ದರು. ಈಗಲೂ ಅವರಿಗೆ ಗಾಂಧಿ ಬಗ್ಗೆ ಅಭಿಮಾನ ಇಲ್ಲ. ಜನರ ಮುಂದೆ ನಾಟಕವಾಡುವ ಕೆಲಸ ಮಾಡುತ್ತಿದ್ದಾರೆ. ಗಾಂಧಿ ವಿರೋಧಿ ಜನರ ಸರ್ಕಾರ ನಮ್ಮ ದೇಶದಲ್ಲಿ ಅಧಿಕಾರ ನಡೆಸುತ್ತಿವೆ. ಗಾಂಧಿಯವರು ಎಷ್ಟೇ ಕಷ್ಟ ಇದ್ದರೂ ಸತ್ಯಕ್ಕಾಗಿ ಹೋರಾಟ ಮಾಡಿದರು.

ನಮ್ಮ ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಹಾಳು ಮಾಡುವ ಸರ್ಕಾರ ಇದೆ. ಜಾತ್ಯತೀತ ವ್ಯವಸ್ಥೆ ಹಾಳು ಮಾಡುವ, ರಾಜಕೀಯ ಪಕ್ಷಗಳನ್ನು ಮುಚ್ಚಿ ಹಾಕುವ ಕೆಲಸ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ. ಮಾಡಿಕೊಳ್ಳುತ್ತಿದೆ.

ನಾವು ಇವರ ವಿರುದ್ಧ ಹೋರಾಟ ಮಾಡಬೇಕಿದ್ದರೆ. ಕಾಶ್ಮೀರ ಸಮಸ್ಯೆ, ಆಸ್ಸಾಂ ಸಮಸ್ಯೆ, ಕರ್ನಾಟಕದ. ಸಮಸ್ಯೆ ಎಲ್ಲದರ ಬಗ್ಗೆ ಪ್ರತಿಭಟನೆ ಮಾಡಬೇಕು.

ಸಾಮಾಜಿಕ ಜಾಲ ತಾಣದಲ್ಲಿ ನಮ್ಮನ್ನು ಅವಮಾನ ಮಾಡುತ್ತಿದ್ದಾರೆ. ಗಾಂಧಿಯನ್ನು ಕೊಂದವರು ಸಂಸದರಾಗಿದ್ದಾರೆ. ಮೋದಿ ಏನೂ ಹೇಳುವುದಿಲ್ಲ. ವಿರೋಧಿಸಿದರೆ ನನ್ನನ್ನೇ ದೇಶ ದ್ರೋಹಿಗಳನ್ನಾಗಿ ಬಿಂಬಿಸಲಾಗಿತ್ತಿದೆ. ರಾಮನ ಹೆಸರಿನಲ್ಲಿ ಹಲ್ಲೆ, ದಬ್ಬಾಳಿಕೆ ನಡೆಯುತ್ತಿದೆ. ರಾಮನ ಹೆಸರಿನಿಂದ ಭಕ್ತಿ ಬರಬೇಕು ಅದನ್ನು ಬಿಟ್ಟು ಹಲ್ಲೆ ಕೊಲೆ ಮಾಡಲು ರಾಮನ ಹೆಸರು ಬಳಕೆ ಮಾಡಿಕೊಳ್ಳಲಾಗುತ್ತಿದೆ. ದ್ವೇಷದ ಹೆಸರಿನಲ್ಲಿ ದೇಶ ಕಟ್ಟಲು ಸಾಧ್ಯವಿಲ್ಲ. ದೇಶಕ್ಕೆ ತ್ಯಾಗ ಮಾಡಿದವರನ್ನು ದೇಶದ್ರೋಹಿ ಎನ್ನಲಾಗುತ್ತಿದೆ.

ಹಾವು ಮುಂಗೂಸಿಯಂತಿದ್ದ ಡಾ.ಜಿ. ಪರಮೇಶ್ವರ, ಸಿದ್ದರಾಮಯ್ಯ ಗಾಂಧೀಜಿ ಅವರ ಸದ್ಬಾವನಾ ಯಾತ್ರಯಲ್ಲಿ ಕಂಡು ಬಂದರಾದರೂ ಒಬ್ಬರಿಗೊಬ್ಬರು ಅಂತರ ಕಾಯ್ದುಕೊಂಡರು.

ಸದ್ಭಾವನಾ ಯಾತ್ರೆಯಲ್ಲಿ ಪಕ್ಷದ ನಾಯಕರಾದ ದಿನೇಶ್ ಗುಂಡೂರಾವ್, ಡಾ. ಜಿ. ಪರಮೇಶ್ವರ ಅವರೊಂದಿಗೆ ಸಿದ್ದರಾಮಯ್ಯ ಭಾಗವಹಿಸಿದ್ದರು.

 

 

 

ಫ್ರೆಶ್ ನ್ಯೂಸ್

Latest Posts

Featured Videos