ಪಾಠ ಕಲಿಯದ ಪಾಕ್

ಪಾಠ ಕಲಿಯದ ಪಾಕ್

ಕಾಶ್ಮೀರ, ಏ. 13 :  ಕೊರೋನಾ ಮಹಾಮಾರಿ ದೇಶವನ್ನೇ ನಡುಗಿಸುತ್ತಿದೆ. ಗಡಿಯಲ್ಲಿ ಉದ್ಧಟತನ ಮೆರೆದಿದ್ದ ಪಾಕಿಸ್ತಾನದ ಸೈನಿಕರನ್ನು ಭಾರತೀಯ ಯೋಧರು ಭರ್ಜರಿ ಬೇಟೆಯಾಡಿದ್ದು 15 ಪಾಕ್ ಸೈನಿಕರು,8 ಮಂದಿ ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ.
ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಸೈನಿಕರು ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸುತ್ತಿದ್ದರು. ಭಾರತೀಯ ಸೇನೆಯ ಯೋಧರು ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಲಾಗಿದ್ದು, ವೇಳೆ ಪಾಕಿಸ್ತಾನದ ಸೇನೆ,ಭಯೋತ್ಪಾದಕರು ಸೇರಿ 23 ಮಂದಿ ಹತರಾಗಿದ್ದಾರೆ ಎಂದು ಭದ್ರತಾ ಪಡೆಯ ಅಧಿಕಾರಿಗಳಿಬ್ಬರು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆ ದಾಳಿ ನಡೆಸಿರುವುದನ್ನು ಪಾಕಿಸ್ತಾನ ಸೇನೆ ಸಹ ಖಚಿತಪಡಿಸಿದೆ. ದಾಳಿಯಲ್ಲಿ 15 ವರ್ಷದ ಬಾಲಕಿ ಸೇರಿ ನಾಲ್ವರು ಗಾಯಗೊಂಡಿದ್ದಾರೆಂದು ಆರೋಪಿಸಿದೆ.

ಫ್ರೆಶ್ ನ್ಯೂಸ್

Latest Posts

Featured Videos