ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ

ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ

ಕೆ.ಆರ್.ಪುರ, ಸೆ. 6:  ಎನ್.ಸಿ.ಸಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕುಷ್ಠರೋಗ ತಪಾಸಣೆ ಮಾಡಲಾಗುತ್ತದೆ ಎಂದು ಆರೋಗ್ಯ ನಿರೀಕ್ಷಕ ಗುರುರಾಜ್ ತಿಳಿಸಿದರು.

ಕೆ.ಆರ್.ಪುರದ ಬಸವನಪುರ ವಾರ್ಡ್ ಗಳಲ್ಲಿ  ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನಕ್ಕೆ ಹಿರಿಯ ಆರೋಗ್ಯ ನಿರೀಕ್ಷಕರೊಂದಿಗೆ ಸೇರಿ ಚಾಲನೆ ನೀಡಿ ಮಾತನಾಡಿದ ಅವರು, ಸಮಸ್ಯಾತ್ಮಕ ಪ್ರದೇಶಗಳಿಗೆ ತೆರಳಿ ತಪಾಸಣೆ ನಡೆಸಲು ಎನ್.ಸಿ.ಸಿ ವಿಧ್ಯಾರ್ಥಿಗಳಿಗೆ ಸೂಚಿಸಲಾಗಿದೆ ಎಂದರು.

ಬೆಂಗಳೂರು ಪೂರ್ವ ತಾಲೂಕು ವ್ಯಾಪ್ತಿಯಲ್ಲಿ10 ಕುಷ್ಠರೋಗಿಗಳು ಚಿಕಿತ್ಸೆ ಪಡುಯುತ್ತಿದ್ದು, ಅದರ ಪೈಕಿ 2 ರೋಗಿಗಳು ಕೆ.ಆರ್.ಪುರದಲ್ಲಿ ವಾಸವಿದ್ದಾರೆ ಇವರೆಲ್ಲರೂ ಹೊರ ರಾಜ್ಯದವರು ಎಂದರು.

ಭಾರತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರು 150ನೆ ಜನ್ಮದಿನದ ಅಂಗವಾಗಿ ಕುಷ್ಠರೋಗ ಮುಕ್ತ ದೇಶ ಮಾಡುವ ನಿಟ್ಟಿನಲ್ಲಿ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನವನ್ನು ಹಿರಿಯ ಅಧಿಕಾರಿಗಳ ಸೂಚನೆಯಂತೆ ನಮ್ಮ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಇದರ ಸಂಬಂಧ 5 ಎನ್.ಸಿ.ಸಿ ತಂಡಗಳು ರಚನೆ ಮಾಡಿದ್ದು, ಒಂದು ತಂಡ ದಿನಕ್ಕೆ 25 ರಿಂದ 50 ಮನೆಗಳಿಗೆ ಭೇಟಿ ನೀಡಿ ಮನೆಯ ಸದಸ್ಯರನ್ನು ಪರೀಕ್ಷಿಸಿ ಕುಷ್ಠರೋಗ ಶಂಕಿತರರು ಕಂಡು ಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳು ಸೂಚನೆ ನೀಡುತ್ತಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಬ್ ಲೆಫ್ಟಿನೆಂಟ್ ಚಂದ್ರಕಾಂತ್, ಎನ್.ಸಿ.ಸಿ ಅಧಿಕಾರಿ ನಾರಾಯಣ ಸ್ವಾಮಿ, ಹಿರಿಯ ಆರೋಗ್ಯ ನಿರೀಕ್ಷಕ ಬಾಬು, ಕೆ.ಆರ್.ಪುರ ಆರೋಗ್ಯ ನಿರೀಕ್ಷಕ ಶ್ರೀಶೈಲ, ಮೇಲ್ವಿಚಾರಕಿ ಈಶ್ವರಿ ಸೇರಿದಂತೆ ಎನ್ ಸಿಸಿ ವಿಧ್ಯಾರ್ಥಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos