ಕಾನೂನು ಅರಿವು ಅತ್ಯವಶ್ಯ

ಕಾನೂನು ಅರಿವು ಅತ್ಯವಶ್ಯ

ಕೊರಟಗೆರೆ: ಗ್ರಾಮೀಣ ಭಾಗದ ಬಡಜನರಿಗೆ ಕಾನೂನಿನ ಬಗ್ಗೆ ಅರಿವು ಮೂಡಿಸುವುದು ಸ್ವಯಂ ಸೇವಕರ ಕರ್ತವ್ಯವಾಗಿದೆ ಎಂದು ಸಹಾಯಕ ಸರಕಾರಿ ಅಭಿಯೋಜಕರಾದ ಮುಜಾಮಿಲ್ ಪಾಷ ತಿಳಿಸಿದರು.
ಪಟ್ಟಣದತಾಪಂ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ತುಮಕೂರು, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಕೊರಟಗೆರೆ, ಕಾನೂನು ಸಾಕ್ಷರತೆ ಹಾಗೂ ಕಾನೂನು ಅರಿವು ಮತ್ತು ನೆರವು ಮತ್ತು ಸ್ವಯಂ ಸೇವಕರಿಗಾಗಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮಗಳಲ್ಲಿ ಕಾನೂನಿನ ಬಗ್ಗೆ ತಿಳಿಯದೆ ಎಷ್ಟೂ ಮುಗ್ಧ ಜನರಿದ್ದಾರೆ, ಅಂತಹ ಜನರಿಗೆ ಸ್ವಯಂ ಸೇವಕರು ಗ್ರಾಮಗಳಿಗೆ ತೆರಳಿ ಕಾನೂನಿನ ಬಗ್ಗೆ ತಿಳಿಸುವುದು ಅವಶ್ಯ. ದೇಶದ ಪ್ರತಿಯೊಬ್ಬ ನಾಗರಿಕನಿಗೂ ಕಾನೂನಿನ ಜ್ಞಾನ ಹೊಂದಿರಬೇಕು. ಕಾನೂನಿನ ಜ್ಞಾನ ತಿಳಿದಾಗ ಮಾತ್ರ ಅಪರಾಧಗಳ ಸಂಖ್ಯೆ ಕಡಿಮೆಯಾಗುತ್ತದೆ. ಅದ್ದರಿಂದ ಗ್ರಾಮೀಣ ಭಾಗದ ಜನರಿಗೆ ಕಾನೂನಿನ ಬಗ್ಗೆ ತಿಳಿಸಿಅಪರಾಧಗಳಿಂದ ದೂರ ಉಳಿಯುವಂತೆ ಮಾಡಬೇಕು ಎಂದು ಹೇಳಿದರು.
ವಕೀಲ ಜಿ.ಎಂ.ಕೃಷ್ಣಮೂರ್ತಿ ಮಾತನಾಡಿ ಪ್ರತಿಯೊಬ್ಬ ಪ್ರಜೆಯು ನಮ್ಮ ದೇಶದ ಕಾನೂನಿನ ಬಗ್ಗೆ ಅರಿತಿರಬೇಕು. ನಮ್ಮ ಮೂಲಭೂತ ಹಕ್ಕುಗಳಲ್ಲಿ ಸಮಾನತೆಯ ಹಕ್ಕು, ಸ್ವಾತಂತ್ರದ ಹಕ್ಕು, ಧಾರ್ಮಿಕ ಹಕ್ಕು, ಶೋಷಣೆಯ ವಿರುದ್ದದ ಹಕ್ಕು, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುನ್ನ ನಮ್ಮ ಸಂವಿಧಾನದಲ್ಲಿ ಹೊಂದಿದ್ದು ಇಷ್ಟೂ ಮೂಲಭೂತ ಹಕ್ಕಗಳನ್ನ ನಾವುಗಳು ತಿಳಿದಿರಬೇಕು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯನ್ನ ಮಧುಗಿರಿ ಅಧಿಕ ಸಿವಿಲ್ ನ್ಯಾಯದೀಶರಾದ ಆರ್.ಪಲ್ಲವಿರವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿದರು. ಇದೇ ವೇಳೆ ತಾಲೂಕು ಕಾನೂನು ಸೇವಾ ಸಮಿತಿ ವಕೀಲರಾದ ಸಂಜೀವರಾಜು, ಜಿ.ಎಂ.ಕೃಷ್ಣಮೂರ್ತಿಹುಸೇನ್ ಪಾಷ, ರಾಜಣ್ಣ, ನ್ಯಾಯಲಯದ ಸಿಬ್ಬಂದಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos