ಪ್ರೊ ಕಬಡ್ಡಿ ಲೀಗ್ ಟೂರ್ನಿ ಹರಾಜಿನ ಮೊದಲ ದಿನ ಕೆಲ ದಾಖಲೆ ನಿರ್ಮಾಣ!

ಪ್ರೊ ಕಬಡ್ಡಿ ಲೀಗ್ ಟೂರ್ನಿ ಹರಾಜಿನ ಮೊದಲ ದಿನ ಕೆಲ ದಾಖಲೆ ನಿರ್ಮಾಣ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಬಡ್ಡಿ ಎನ್ನುವುದು ಬರೀ ಸ್ಥಳೀಯ ಆಟಯಾಗಿ ಉಳಿದಿಲ್ಲಾ. ಈಗ ಇದು ಅಂತರಾಷ್ಟ್ರೀಯ ಅಟವಾಗಿ ಬೆಳೆದಿದ್ದೆ. 10ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನ ಆಟಗಾರರ ಹರಾಜು ಪ್ರಕ್ರಿಯೆ ನಿನ್ನೆ ಮತ್ತು ಇವತ್ತು ಮುಂಬೈನಲ್ಲಿ ನಡೆಯಲಿದೆ. 500ಕ್ಕೂ ಹೆಚ್ಚು ಆಟಗಾರರು ಹರಾಜಿಗೆ ನೋಂದಣಿ ಮಾಡಿಕೊಂಡಿದ್ದು, ವಿವಿಧ ತಂಡಗಳಿಗೆ ಬಿಕರಿಯಾಗುವ ನಿರೀಕ್ಷೆಯಲ್ಲಿದ್ದಾರೆ.
ಪ್ರೊ ಕಬಡ್ಡಿ ಲೀಗ್ ಟೂರ್ನಿ ಹರಾಜಿನ ಮೊದಲ ದಿನ ಕೆಲ ದಾಖಲೆ ನಿರ್ಮಾಣವಾಗಿದೆ. ಇರಾನ್ ಆಲ್ರೌಂಡರ್ ಮೊಹಮ್ಮದ್‌ರೆಜಾ ಹಾಗೂ ಫಜಲ್ ಅತ್ರಾಚಲಿ ದಾಖಲೆ ಮೊತ್ತಕ್ಕೆ ಹರಾಜಾಗಿದ್ದಾರೆ. ಇತ್ತ ಭಾರತೀಯ ಆಟಗಾರರು ಕೋಟಿ ಕೋಟಿ ರೂಗೆ ಮಾರಾಟವಾಗಿದ್ದಾರೆ.
ಹತ್ತನೇ ಆವೃತ್ತಿ ಪ್ರೊ ಕಬಡ್ಡಿ ಲೀಗ್ ಟೂರ್ನಿಯ ಹರಾಜಿನ ಮೊದಲ ದಿನವೇ ದಾಖಲೆ ನಿರ್ಮಾಣವಾಗಿದೆ. ಭಾರತೀಯ ಆಟಗಾರರ ಪೈಕಿ ಮನಿಂದರ್ ಸಿಂಗ್ ಬರೋಬ್ಬರಿ 2.12 ಕೋಟಿ ರೂಗೆ ಹರಾಜಾಗಿದ್ದಾರೆ. ಬೆಂಗಾಲ್ ವಾರಿಯರ್ಸ್ ದಾಖಲೆ ಮೊತ್ತ ನೀಡಿ ಮನಿಂದರ್ ಸಿಂಗ್ ಖರೀದಿಸಿದೆ. ಇನ್ನು ಮೊದಲ ದಿನದ ಗರಿಷ್ಠ ಮೊತ್ತಕ್ಕೆ ಹರಾಜಾದ ಹೆಗ್ಗಳಿಕೆಗೆ ಇರಾನ್ ಆಲ್ರೌಂಡರ್ ಮಹೊಮ್ಮದ್‌ರೆಜಾ ಶಡೊಲೂಯಿ ಚಿಯಾನೆ ಪಾತ್ರರಾಗಿದ್ದಾರೆ. ಮೊಹಮ್ಮದ್‌ರೆಜಾ 2.35 ಕೋಟಿ ರೂಪಾಯಿಗೆ ಪುಣೇರಿ ಪಲ್ಟಾನ್ ಪಾಲಾಗಿದ್ದಾರೆ.
ಬೆಂಗಳೂರು ಬುಲ್ಸ್ 20 ಲಕ್ಷ ರೂಪಾಯಿ ನೀಡಿ ಕಬಡ್ಡಿ ಪಟು ವಿಶಾಲ್ ಖರೀದಿಸಿದೆ. ಸಂದೀಪ್ ನರ್ವಾಲ್, ದೀಪಕ್ ನಿವಾಸ್ ಹೂಡ ಸೇರಿದಂತೆ ಕೆಲ ಪ್ರಮುಖ ಕಬಡ್ಡಿ ಪಟುಗಳು ಮಾರಾಟವಾಗದೆ ನಿರಾಸೆಗೊಂಡಿದ್ದಾರೆ.
ಎರಡು ದಿನಗಳ ಕಾಲ ಪ್ರೊ ಕಬಡ್ಡಿ ಲೀಗ್ ಟೂರ್ನಿ ಹರಾಜು ನಡೆಯಲಿದೆ. ಈ ಬಾರಿ ಎಲ್ಲಾ 12 ತಂಡಗಳಿಗೂ ಹರಾಜಿನಲ್ಲಿ ಆಟಗಾರರ ಖರೀದಿಗೆ 5 ಕೋಟಿ ರೂಪಾಯಿ ಬಳಸಲು ಅವಕಾಶ ನೀಡಲಾಗಿದೆ. ಸದ್ಯ ಎಲ್ಲಾ ತಂಡಗಳು ಕೆಲ ಆಟಗಾರರನ್ನು ರೀಟೈನ್‌ ಮಾಡಿಕೊಂಡಿದ್ದು, ಇನ್ನುಳಿದ ಆಟಗಾರರನ್ನು ಹರಾಜಿನಲ್ಲಿ ಖರೀದಿಸಲಿವೆ.

ಫ್ರೆಶ್ ನ್ಯೂಸ್

Latest Posts

Featured Videos