ಮಾಜಿ ಸಿಎಂ ಗೆ ಶಾಸಕಿ ಪೂರ್ಣೀಮಾ ತರಾಟೆ

ಮಾಜಿ ಸಿಎಂ ಗೆ ಶಾಸಕಿ ಪೂರ್ಣೀಮಾ ತರಾಟೆ

ರಾಜ್ಯ ರಾಜಕಾರಣದಲ್ಲಿ ಕೆಲವರಿಗೆ ಟಿಕೆಟ್ ಸಿಕ್ಕರೆ ಮತ್ತೆ ಕೆಲವರಿಗೆ ಸಿಗಲಿಲ್ಲ. ಮತ್ತೆ ಕೆಲವರು ನಾಮಿನೇಷನ್ ಸಲ್ಲಿಸಿ ಪ್ರಚಾರದ ಭರಾಟೆಯಲ್ಲಿ ತಿರುತ್ತಿದ್ದಾರೆ. ಆದರೆ ತಂದೆಯನ್ನು ತಮ್ಮ ತೆವುಲಿನ ಪ್ರಚಾರದ ಭರಾಟೆಗೆ ಬಳಸಿಕೊಳ್ಳುತ್ತಿರುವುದಕ್ಕೆ ಶಾಸಕಿಯೊಬ್ಬರು ಮಾಜಿ ಸಿಎಂ ಅವರಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪರಿ..

ಚುನಾವಣೆಯಲ್ಲಿ ಪ್ರಚಾರ ಮಾಡಿಕೊಳ್ಳೂವುದು ಅವರವಿರಗೆ ಬಿಟ್ಟಿದ್ದ ವಿಚಾರ, ಆದರೆ ತಮ್ಮ ತೆವಲನ್ನು ತೀರಿಸಿಕೊಳ್ಳಲು ಇಲ್ಲಿ ಕುಟುಂಬಸ್ಥರನ್ನು ರಾಜಕಾರಣಕ್ಕೆ ತಂದು, ಅದರಲ್ಲೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಪ್ರಶ್ನೆ ಕಾಡುತ್ತಿದೆ. ಇಂದು ಕೆ.ಆರ್ ಪುರಂನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೈ ಪಾಳಯಕ್ಕೆ ಸಾಥ್ ನೀಡುವ ಸಲುವಾಗಿ ಪ್ರಚಾರಕ್ಕೆ ತೆರಳಿದ್ದರು. ಸುಮ್ಮನೆ ಅವರಮಟ್ಟಿಗೆ ಪ್ರಚಾರ ಮಾಡಿಕೊಂಡಿದ್ದರೆ ಉತ್ತಮವಾಗಿರುತ್ತಿತ್ತು. ಅದನ್ನು ಬಿಟ್ಟು ಮಾಜಿ ಸಚಿವ ದಿವಂಗತ ಎ. ಕೃಷ್ಣಪ್ಪರವರನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದೇ ಸಿದ್ದುಗೆ ಎಡವಟ್ಟಾಯ್ತು.

ಸಮ್ಮಿಶ್ರ ಸರ್ಕಾರದಲ್ಲಿ ನಾವೇ ಅಧಿಕಾರಕ್ಕೆ ಬರಬೇಕಂತ ನಮ್ಮ ತಂದೆಯನ್ನು ತುಳಿಯುವ ಮೂಲಕ ನನ್ನ ಅಪ್ಪ ಮಾಜಿ ಸಚಿವ ದಿವಂಗತ ಎ. ಕೃಷ್ಣಪ್ಪರವರಿಗೆ ಮೋಸ ಮಾಡಿದ್ದೀರಿ. ಸಿಎಂ ಸ್ಥಾನಕ್ಕೆ ಎಲ್ಲಿ ಬಂಗ ಬರುತ್ತದೆಯೋ ಎಂಬ ನಿಟ್ಟಿನಲ್ಲಿ ಅಂದು ಟಿಕೆಟ್ ತಪ್ಪಿಸಿದ್ದೀರಿ. ತಂದೆ ಬಗ್ಗೆ ನಿಮಗೆ ನಿಜವಾಗಲೂ ಕಾಳಜಿ ಇರಲಿಲ್ಲ. ಒಂದು ವೇಳೆ ಬುದ್ದಿ ಇದ್ದಿದ್ದರೆ ನೀವೆ ಬಸವರಾಜ್ ಅವರಿಗೆ ಬುದ್ದಿ ಹೇಳಬಹುದಿತ್ತು. ನೀವು ಹಾಕಿದ ಲಕ್ಷಣ ರೇಖೆಯನ್ನು ಅವರು ದಾಟುತ್ತಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಶಾಸಕಿ ಪೂರ್ಣೀಮಾ ಕಿಡಿಕಾರಿದ್ದಾರೆ.

ಬಸವರಾಜು ಎ. ಕೃಷ್ಣಪ್ಪರ ಶಿಷ್ಯನಿದ್ದಂತೆ, ಕೃಷ್ಣಪ್ಪರನ್ನು ಉದ್ದೇಶಪೂರ್ವಕವಾಗಿ ತುಳಿಯುವ ಸಲುವಾಗಿ  ಬಸವರಾಜ್ ರನ್ನು ದಾಳವಾಗಿ ಬಳಸಿಕೊಂಡಿದ್ದೀರಿ, ದಿವಂಗತ ಎ. ಕೃಷ್ಣಪ್ಪರವರ ಬಗ್ಗೆ ಬಸವರಾಜನಿಗೆ ಕರೆದು ತಿಳಿಹೇಳಬಹುದಿತ್ತು. ಆದ್ರೆ ಅವೆಲ್ಲವನ್ನು ಗಾಳಿಗೆ ತೂರಿ ಗೂಳಿ ಬಸವರಿಗೆ ಟಿಕೆಕೊಟ್ರಿ. ನಿಮಗೆ ಕೃಷ್ಣಪ್ಪರ ಮೇಲೆ ಅಪಾರ ಅಭಿಮಾನ ಇದ್ದಿದ್ದರೆ ನನನ್ನು ಕಾಂಗ್ರೆಸ್ನಿಂದ ಅಮಾನತ ಮಾಡಿದ್ರಿ. ಬಿಜೆಪಿ ನನ್ನನ್ನು ಶಾಸಕಿಯಾಗಿಯನ್ನಾಗಿ ಮಾಡಿದೆ. ಕ್ಷೇತ್ರದ ಜನ ಕೃಷ್ಣಪ್ಪನವರ ಮಗಳಾಗಿ ನನ್ನ ಜೊತೆ ಇರ್ತಾರೆ. ಬಸವರಾಜನ್ನು ಒಪ್ಪಿಕೊಂಡಿದ್ದು ಈ ಭಾರಿ ಗೆಲ್ಲಿಸುತ್ತೇವೆಂದು ಸಿದ್ದರಾಮಯ್ಯರಿಗೆ ಸವಾಲನ್ನು ಹಾಕಿದರು.

ಇನ್ನು ಬಿಜೆಪಿ ಅಭ್ಯರ್ಥಿ ಬೈರತಿ ಬಸವರಾಜ್ ಮಾತನಾಡಿ ನಂದೀಶ್ ರೆಡ್ಡಿ ಹಾಗೂ ಬೈರತಿ ಬಸವರಾಜು ಅವರನ್ನು ಹೊರಗಡೆ ಜೋಡೆತ್ತು ಎನ್ನುತ್ತಿದ್ದಾರೆ, ಅದೇರೀತಿ ಕೆಲಸವನ್ನು ಸಹಾ ಮಾಡುತ್ತೇವೆಂದ್ರು. ನಂದೀಶ್ ರೆಡ್ಡಿ ಪಕ್ಷಕ್ಕಾಗಿ ಯಾವುದೇ  ತ್ಯಾಗಕ್ಕೂ ಸಿದ್ದ ನಾನು ಕರ್ಣನಲ್ಲ ಆದರೆ ಪಕ್ಷದ ಶಿಸ್ತಿನ ಕಾರ್ಯಕರ್ತನೆಂದ ಹೇಳುವ ಮೂಲಕ ನಂದೀಶ್ ರೆಡ್ಡಿ ವಿರೋಧಿಗಳಿಗೆ ಮಾತಿನ ಮೂಲಕ ತಿವಿದರು.

 

ಫ್ರೆಶ್ ನ್ಯೂಸ್

Latest Posts

Featured Videos