ಲಾರಿ-ಬೈಕ್ ಢಿಕ್ಕಿ: ಇಬ್ಬರ ಸಾವು

ಲಾರಿ-ಬೈಕ್ ಢಿಕ್ಕಿ: ಇಬ್ಬರ ಸಾವು

ಧಾರವಾಡ: ದ್ವೀಚಕ್ರ ವಾಹನ ಹಾಗೂ ಲಾರಿ ಮುಖಾಮುಖಿ ಢಿಕ್ಕಿ ಹೊಡೆದ
ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ. ಸವದತ್ತಿಯಿಂದ ಧಾರವಾಡಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ
ತಾಲೂಕಿನ ಹಾರೋಬೆಳವಡಿ‌ ಗ್ರಾಮದ ಬಳಿ ಧಾರವಾಡ-ಸವದತ್ತಿ ರಸ್ತೆಯಲ್ಲಿ ಘಟನೆ  ನಡೆದಿದೆ.

ಘಟನೆಯಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.

ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ವಿನೀತ್ ಮುತ್ತಗಿ (31) ಹಾಗೂ ಧಾರವಾಡ ನಗರದ ಭೀಮರಾವ್ ಹೊಂಗಲ್ (50) ಮೃತಪಟ್ಟವರು.  ಧಾರವಾಡ ಗ್ರಾಮೀಣ ಪೊಲೀಸ್ ಠಾಣಾ
ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos