ಲಾರಾ ಆಸ್ಪತ್ರೆಯಿಂದ ಬಿಡುಗಡೆ

ಲಾರಾ ಆಸ್ಪತ್ರೆಯಿಂದ ಬಿಡುಗಡೆ

ಮುಂಬಯಿ, ಜೂ. 27 : ಎದೆ ನೋವಿನ ಹಿನ್ನೆಲೆಯಲ್ಲಿ ಗ್ಲೋಬಲ್ ಹಾಸ್ಪಿಟಲ್ ಗೆ ದಾಖಲಾಗಿದ್ದ ವಿಂಡೀಸ್  ಕ್ರಿಕೆಟ್  ತಾರೆ ಬ್ರಿಯಾನ್ ಲಾರಾ ಬುಧವಾರ ಬಿಡುಗಡೆಗೊಂಡಿದ್ದಾರೆ. ಜಿ ಮ್ ನಲ್ಲಿ  ಅಭ್ಯಾಸ ನಡೆಸುತ್ತಿದ್ದ ವೇಳೆ ಎದೆ ನೋವು ಕಾಣಿಸಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆರೋಗ್ಯವಾಗಿದ್ದಾರೆ, ಹಾಗಾಗಿ ಬಿಡುಗಡೆ ಮಾಡಲಾಯಿತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಪ್ರಸಕ್ತ ವಿಶ್ವಕಪ್  ನೇರ ಪ್ರಸಾರ ಮಾಡುವ ಸ್ಟಾರ್ ಸ್ಪೋರ್ಟ್ ಚಾನೆಲ್ ನಲ್ಲಿ  ಲಾರಾ ವಿಶ್ಲೇಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos