ಸ್ಮಿತ್ ಗೆ ಜೀವದಾನ ನೀಡಿದ ಲಂಕಾ

ಬೆಂಗಳೂರು, ಅ. 31 : ಕ್ರಿಕೆಟ್ ಲೋಕದಲ್ಲಿ ಒಂದಲ್ಲಾ ಒಂದು ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಬ್ರಿಸ್ಬೇನ್ನಲ್ಲಿ ನಡೆದ
ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ನಡುವಣ ಟಿ-20 ಪಂದ್ಯದಲ್ಲೂ ವಿಶೇಷ ಘಟನೆ ನಡೆದಿದೆ.
ಲಂಕಾ ಬೌಲರ್ ಸಂದಕನ್ ಚೆಂಡನ್ನು ತೆಗೆದುಕೊಂಡು ಆಸ್ಟ್ರೇಲಿಯಾ ಬ್ಯಾಟ್ಸಮನ್ ಸ್ಟೀವ್ ಸ್ಮಿತ್ರನ್ನು ವಿಕೆಟ್ಗೆ ಬಡಿಯುವ ಬದಲು ಬಲಗೈನಲ್ಲಿ ಚೆಂಡನ್ನು ಹಿಡಿದು ಎಡಗೈನಲ್ಲಿ ವಿಕೆಟ್ ವಿಕೆಟ್ ಕಿತ್ತಿರುವುದು ವಿಶೇಷ. ಎರಡನೇ ಟಿ-20 ಫೈಟ್ನಲ್ಲಿ ಶ್ರೀಲಂಕಾ ಬ್ಯಾಟಿಂಗ್- ಬೌಲಿಂಗ್ನಲ್ಲಿ ವಿಫಲ ಕಂಡಿದೆ. ವಾರ್ನರ್-ಸ್ಮಿತ್ ಅಬ್ಬರದ ಆಟದ ನೆರವಿನಿಂದ ಆಸ್ಟ್ರೇಲಿಯಾ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಲಂಕಾ ಬೌಲರ್ ಲಕ್ಷನ್ ಸಂದಕನ್ ಎದುರಾಳಿ ತಂಡದ ಬಲಿಷ್ಠ ಬ್ಯಾಟ್ಸಮನ್ ಸ್ಟೀವ್ ಸ್ಮಿತ್ರನ್ನು ಸುಲಭವಾಗಿ ರನೌಟ್ ಮಾಡುವ ಅವಕಾಶವನ್ನು ಕೈಯಾರೆ ಕಳೆದುಕೊಂಡರು. ಸಂದಕನ್ ಬೌಲಿಂಗ್ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಡೇವಿಡ್ ವಾರ್ನರ್ ಚೆಂಡನ್ನು ನೇರವಾಗಿ ಬಾರಿಸಿದರು. ಆ ವೇಳೆ ಚೆಂಡು ವಿಕೆಟ್ಗೆ ಬಡಿಯುತ್ತದೆ. ಆದರೆ, ಚೆಂಡು ಬೌಲರ್ ಕೈಗೆ ಟಚ್ ಆಗಿರುವುದಿಲ್ಲ. ಸ್ಮಿತ್ ರನ್ ಕಲೆಹಾಕಲು ಓಡಿದ್ದಾರೆ. ತಕ್ಷಣವೇ ಸಂದಕನ್ ಪಕ್ಕದಲ್ಲಿದ್ದ ಚೆಂಡನ್ನು ತೆಗೆದುಕೊಂಡು ವಿಕೆಟ್ಗೆ ಬಡಿಯುವ ಬದಲು ಬಲಗೈನಲ್ಲಿ ಚೆಂಡನ್ನು ಹಿಡಿದು ಎಡಗೈನಲ್ಲಿ ವಿಕೆಟ್ ಕಿತ್ತಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos