ಲಂಕಾ ಬಾಂಬರ್ ಗಳು ಬೆಂಗಳೂರಿಗೆ ಭೇಟಿ ನೀಡಿದ್ದರು.!

ಲಂಕಾ ಬಾಂಬರ್ ಗಳು ಬೆಂಗಳೂರಿಗೆ ಭೇಟಿ ನೀಡಿದ್ದರು.!

ಕೊಲಂಬೋ, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಕಳೆದ ಎಪ್ರಿಲ್ 21ರಂದು ಇಸ್ಲಾಮಿಕ್ ಆತ್ಮಾಹುತಿ ಬಾಂಬರ್ ಗಳು ಕೊಲಂಬೋದಲ್ಲಿನ 3 ಚರ್ಚುಗಳು ಮತ್ತು 3 ವಿಲಾಸಿ ಹೊಟೇಲುಗಳ ಮೇಲೆ ಬಾಂಬ್ ದಾಳಿ ನಡೆಸಿ 253 ಜನರನ್ನ ಬಲಿ ಪಡೆದು 500ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದ್ದರು.

ಏ. 21ರಂದು ಇಲ್ಲಿ ಅತ್ಯಂತ ಘೋರ ಭಯೋತ್ಪಾದಕ ದಾಳಿ ನಡೆಸಿ 253 ಜನನರನ್ನು ಬಲಿಪಡೆದಿದ್ದ ಆತ್ಮಾಹುತಿ ಬಾಂಬರ್ ಗಳು ಕೆಲವು ರೀತಿಯ ತರಬೇತಿ ಪಡೆಯಲು ಕಾಶ್ಮೀರ, ಬೆಂಗಳೂರು ಮತ್ತು ಕೇರಳಕ್ಕೆ ಭೇಟಿ ನೀಡಿದ್ದರು ಎಂಬ ಆಘಾತಕಾರಿ ವಿಷಯವನ್ನು ಲಂಕೆಯ ಸೇನಾ ಮುಖ್ಯಸ್ಥರು ಬಹಿರಂಗಪಡಿಸಿದ್ದಾರೆ.

ಕೊಲಂಬೋ ಈಸ್ಟರ್ ದಾಳಿಗೆ ಮುನ್ನ ಭಾರೀ ಸಂಭವನೀಯ ಭಯೋತ್ಪಾದಕ ದಾಳಿಗಳ ಬಗ್ಗೆ ಭಾರತದ ಗುಪ್ತಸಚರ ದಳ ಲಂಕಾ ಸರಕಾರಕ್ಕೆ ಮಾಹಿತಿ ನೀಡಿತ್ತು.

ಲಂಕೆಯ ಉನ್ನತ ಭದ್ರತಾ ಅಧಿಕಾರಿ, ಆತ್ಮಾಹುತಿ ಬಾಂಬರ್ ಗಳು ತಮ್ಮ ಯೋಜನೆ ಸಂಬಂಧ ಭಾರತಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿಯನ್ನು ಇದೇ ಮೊದಲ ಬಾರಿಗೆ ಬಹಿರಂಗಪಡಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos