ಕೀನ್ಯಾ ವಾಯುವ್ಯ ಪ್ರದೇಶದಲ್ಲಿ ಭೂಕುಸಿತ

ಕೀನ್ಯಾ ವಾಯುವ್ಯ ಪ್ರದೇಶದಲ್ಲಿ  ಭೂಕುಸಿತ

ನೈರೋಬಿ, ನ.25: ಧಾರಾಕಾರ ಮಳೆಯಿಂದಾಗಿ ಕೀನ್ಯಾದ ವಾಯುವ್ಯ ಪ್ರದೇಶದಲ್ಲಿ ಸುರಿದ ಭೂಕುಸಿತ ಉಂಟಾಗಿದೆ. ಇದುವರೆಗು ಮರಣಹೊಂದಿದವರ ಸಂಖ್ಯೆ 60 ಕ್ಕೆ ಏರಿದ್ದು ಇನ್ನೂ 7 ಜನರ ಶವಕ್ಕೆ ಶೋಧ ನೆಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು ಪ್ರವಾಹ ಉಂಟಾಗಿ ಏಳು ಮಂದಿ ಮಕ್ಕಳು ಸೇರಿದಂತೆ ೫೫ ಮಂದಿ ಮೃತಪಟ್ಟಿದ್ದರು. ಉಗಾಂಡ ಗಡಿ ಸಮೀಪ ಪೋಕಟ್ ಕೌಂಟಿ ಸಮೀಪ ಭಾರೀ ಭೂಕುಸಿತ ಉಂಟಾಗಿ ಸೇತುವೆಗಳು, ರಸ್ತೆಗಳು ನಾಶವಾಗಿವೆ ಎಂದು ಅಧ್ಯಕ್ಷರ ಕಚೇರಿ ಮಾಹಿತಿ ನೀಡಿದೆ.
ಪ್ರವಾಹದಿಂದ ಕಂಗಾಲಾದ ಪ್ರದೇಶಗಳಲ್ಲಿ ಸೇನೆ ಮತ್ತು ಪೊಲೀಸರನ್ನು ಪರಿಹಾರ ಕಾರ್ಯಗಳಿಗಾಗಿ ನಿಯೋಜಿಸಲಾಗಿದೆ. ತೀವ್ರ ಹಾನಗೀಡಾಗಿರುವ ಪ್ರದೇಶಳಲ್ಲಿ ಪರಿಹಾರಕ್ಕೆ ಹೆಲಿಕಾಪ್ಟರ್ಗಳನ್ನು ಬಳಸಿಕೊಳ್ಳಲಾಗುತ್ತಿದೆ.
ಇನ್ನೂ ಹಲವರು ಅವಶೇಷ ಮತ್ತು ಕೆಸರಿನಡಿ ಸಿಕ್ಕಿಹಾಕಿಕೊಂಡಿದ್ದು ಅವರನ್ನು ಹೊರತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮನೆ ಇಲ್ಲದವರಿಗೆ ಬೇರೆಡೆ ಅವಕಾಶ ಕಲ್ಪಿಸಲಾಗಿದೆ. ಆಹಾರ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos