ಭೂಸುಧಾರಣಾ ಕಾಯಿದೆ ತಿದ್ದುಪಡಿಗೆ ವಿರೋಧ; ಮುತ್ತಿಗೆ ಹಾಕಲು ನಿರ್ಧಾರ!

  • In State
  • August 4, 2020
  • 177 Views
ಭೂಸುಧಾರಣಾ ಕಾಯಿದೆ ತಿದ್ದುಪಡಿಗೆ ವಿರೋಧ; ಮುತ್ತಿಗೆ ಹಾಕಲು ನಿರ್ಧಾರ!

ಅಥಣಿ:ಕರ್ನಾಟಕ ಸರ್ಕಾರದ ಭೂಸುಧಾರಣಾ ಕಾಯಿದೆ ತಿದ್ದುಪಡಿ ವಿರೋಧಿಸಿ ನಡೆಯಲಿರುವ ಪ್ರತಿಭಟನೆ ಪೂರ್ವಭಾವಿ ಸಭೆಯನ್ನು ಅಥಣಿ ಪ್ರವಾಸಿ ಮಂದಿರದಲ್ಲಿ  ನಡೆಸಿದ ರೈತ ಸಂಘಟನೆ ಹೋರಾಟದ ರೂಪು ರೇಷೆಗಳ ಕುರಿತು ಚರ್ಚಿಸಲಾಯಿತು.

ಈ ವೇಳೆ ರಾಜ್ಯ ಸಂಚಾಲಕ ಚುನ್ನಪ್ಪ ಪೂಜಾರಿ ಮಾತನಾಡಿ, ಪ್ರವಾಹದ ಕಷ್ಟ ಅನುಭವಿಸಿ ಹತ್ತು ಸಾವಿರ ಕುಟುಂಬಗಳು ಪರಿಹಾರ ಸಿಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಕೊರೋನಾ ನೆಪ ಹೇಳಿ ಜನರನ್ನು ಅರ್ಧ ಹಾದಿಯಲ್ಲಿ ಕೈ ಬಿಟ್ಟಿದ್ದಾರೆ. ಕೊರೋನಾಕ್ಕೆ ಹೆದರಿ ಜನರು ರಸ್ತೆಗೆ ಇಳಿಯದ ಸಮಯದಲ್ಲಿ ಸರ್ಕಾರ, ಎಪಿಎಮ್ ಸಿ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ  ರೈತರಿಗೆ ಮರಣ ಶಾಸನ ಬರೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೊರೇಟ್ ಕಂಪನಿ ಭೂ ಖರೀದಿಗೆ ರತ್ನ ಗಂಬಳಿ ಹಾಸಿದ್ದಾರೆ. ಇದರಿಂದ ರೈತರಿಗೆ ಯಾವುದೇ ಲಾಭ ಇಲ್ಲ. ಆದ್ದರಿಂದ ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಆ.೧೨ರಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮನೆಗೆ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದ್ದು, ೧೩ರಂದು ರಮೇಶ ಜಾರಕಿಹೋಳಿ ಮನೆ ಎದುರು ಪ್ರತಿಭಟನೆ ನಡೆಸಿ ಮನವರಿಕೆ ಮಾಡಲು ಹೋರಾಟ ನಡೆಸಲಾಗುವುದು. ೧೪ರಂದು ಸುರೇಶ್ ಅಂಗಡಿ ಮನೆ ಎದುರು ಪ್ರತಿಭಟನೆ ನಡೆಸಲಿದ್ದು, ೧೫ಕ್ಕೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಹೇಳಿದರು

ರೈತರ ಬೆಳೆಗಳಿಗೆ ಬೆಲೆ ನಿಗದಿ, ಬೆಂಬಲ ಬೆಲೆ, ಕಬ್ಬಿನ ಬಾಕಿ ಬಿಲ್ ಕೊಡುವುದು ಬಿಟ್ಟು ರೈತರಿಗೆ ಅನಾನುಕೂಲ ಉಂಟು ಮಾಡಲಾಗುತ್ತಿದೆ. ರೈತರ ಈ ಹೋರಾಟಕ್ಕೆ ಪಕ್ಷಾತೀತವಾಗಿ ಎಲ್ಲ ಜನಪರ, ಕನ್ನಡಪರ ಸಂಘಟನೆಗಳು ಮುಂದೆ ಬರಬೇಕು ಎಂದು ಮನವಿ ಮಾಡಿದರು..

ಈ ವೇಳೆ ಬೆಳಗಾವಿ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯಕ, ಜಿಲ್ಲಾ ಮುಖಂಡ ಎಮ್ ಸಿ ತಾಂಬೋಳಿ, ಹಸಿರು ಸೇನೆಯ ರಾವಸಾಬ್ ಜಗತಾಪ, ಈರಪ್ಪ ತಂಗಡಿ, ರಾಜು ಪೂಜಾರಿ, ಪ್ರಕಾಶ ಪೂಜಾರಿ,ಡಿ ಎಮ್ ನಾಯಕ, ಗುರಪ್ಪ ಮದನ್ನವರ,ಬಾಬು ಜತ್ತಿ, ಕೃಷ್ಣಾ ಸರಗರ, ರಮೇಶ ಕಲಾರ, ಭಾರತೀಯ ಕಿಸಾನ್ ಸಂಘದ ಶ್ರೀಶೈಲ ಜನಗೌಡ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos