ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗೆ ಭೂಮಿ ಪೂಜೆ

ಜಲ ಜೀವನ್ ಮಿಷನ್ ಯೋಜನೆಯಡಿ ಕಾಮಗಾರಿಗೆ ಭೂಮಿ ಪೂಜೆ

ಶಹಾಪುರ: ಪ್ರತಿ ಮನೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನೀರು ಪೋಲಾಗದಂತೆ ಸರ್ವರಿಗೂ ಸಮನಾಗಿ ಹಂಚುವ ಗುರಿ ಹೊಂದಲಾಗಿದ್ದು ಕ್ರಿಯಾತ್ಮಕ ನಳಗಳ ಸಂಪರ್ಕ ಒದಗಿಸಲಾಗುತ್ತದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.

ತಾಲೂಕಿನ ಚೆನ್ನೂರ ಕೆ ಗ್ರಾಮದಲ್ಲಿ 174.60 ಲಕ್ಷ ರೂ. ವೆಚ್ಚದ 2020-21ನೇ ಸಾಲಿನ ಜಲ ಜೀವನ್ ಮಿಷನ್ ಯೋಜನೆಯಡಿಯಲ್ಲಿ ಮನೆ ಮನೆಗೆ ನಳ ಮತ್ತು ಕುಡಿಯುವ ನೀರು ಒದಗಿಸುವ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ ಪ್ರತಿ ಮನೆಗಳಿಗೆ ನೀರು ಸಂಪರ್ಕ ಕಲ್ಪಿಸುವ ಯೋಜನೆ ಇದಾಗಿದ್ದು, ನೀರಿನ ಸಮಸ್ಯೆ ಉಂಟಾಗುವುದಿಲ್ಲ. ಬಹಳ ದಿನಗಳ ಕಾಲ ಬಾಳಿಕೆ ಬರುವಂತಹ ಗುಣಮಟ್ಟದಿಂದ ಕೂಡಿದ ಕಾಮಗಾರಿಯನ್ನು ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಮಾಜಿ ತಾ.ಪಂ ಅಧ್ಯಕ್ಷ ಹಣಮಂತ್ರಾಯ ದಳಪತಿ, ಶಿವಮಾಹಂತ ಚಂದಾಪುರ ಸಾಹು, ತಮ್ಮನಗೌಡ, ಚನ್ನಬಸ್ಸು ರೆಡ್ಡಿ, ಆರ್.ಎಂ ಹೊನ್ನಾರೆಡ್ಡಿ ನ್ಯಾಯಾವಾದಿಗಳು, ಮಹಾದೇವಪ್ಪಗೌಡ, ಜಿಲ್ಲಾ ಕಾಂಗ್ರೇಸ್ ಸಮಿತಿ ವಕ್ತಾರ ಮಲ್ಲಪ್ಪ ಗೋಗಿ, ದಯಾನಂದ ರೆಡ್ಡಿ ,ಎಇ ಚೆನ್ನವಿರಯ್ಯ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಭೀಮಣ್ಣ ಬಿರೆದಾರ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮಸ್ಥರು ಇದ್ದರು.

ಕೊಟ್;
ಗ್ರಾಮದಲ್ಲಿ ಹಲವಾರು ಸಮಸ್ಯೆಗಳಿದ್ದು ಚರಂಡಿಗಳ ವ್ಯವಸ್ಥೆ, ಮನೆ, ದೇವಸ್ಥಾನಗಳು ಪಾಳು ಬಿದ್ದಿದ್ದು, ಮೂಲಭೂತ ಸೌಕರ್ಯಗಳ ಬೇಡಿಕೆ ಇಟ್ಟರು. ನಂತರ ಮಾತನಾಡಿದ ಶಾಸಕರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಗ್ರಾಮಸ್ಥರು ಆತಂಕ ಪಡಬೇಕಿಲ್ಲಾ, ಗ್ರಾಮಕ್ಕೆ ಹೆಚ್ಚಿನ ಒತ್ತು ನೀಡಿ ಅನುದಾನವನ್ನು ತರಲಾಗುವುದು ಎಂದು ಭರವಸೆ ನೀಡಿದರು.

ಫ್ರೆಶ್ ನ್ಯೂಸ್

Latest Posts

Featured Videos