ಲಾಲ್ ಬಾಗ್ ಹೂವುಗಳಿಂದ ಕಂಗೊಳಿಸಲಿದೆ ಮೈಸೂರು ದಸರಾ

ಲಾಲ್ ಬಾಗ್ ಹೂವುಗಳಿಂದ ಕಂಗೊಳಿಸಲಿದೆ ಮೈಸೂರು ದಸರಾ

ಬೆಂಗಳೂರು, ಜು. 18 : ಬೆಂಗಳೂರು ನಗರದಲ್ಲಿರುವ ಲಾಲ್ ಬಾಗ್ ನೋಡಲು ಬೇರೆಕಡೆಯಿಂದೆಲ್ಲ ಬರುತ್ತಾರೆ. ಇಲ್ಲಿರು ಸಾವಿರಾರು ಜಾತಿಯ ಹೂಗಳು ನೋಡುಗರನ್ನು ಕೈ ಬೀಸಿ ಕರೆಯುತ್ತವೆ. ಹೌದು, ಲಾಲ್ ಬಾಗ್ ನಲ್ಲಿರುವ ವಿವಿಧ ಜಾತಿಯ ಹೂಗಳು ನೊಡಲು ಚಂದ. ಈ ಭಾರಿ ಆ, 9 ರಿಂದ 18 ರವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ಮೈಸೂರು ದಸರಾ ಮಹೋತ್ಸವದಲ್ಲಿ ಚಿತ್ರಣ ಪುಷ್ಪಗಳಲ್ಲಿ ಅರಳಲಿದೆ ಪ್ರದರ್ಶನಕ್ಕೆ ತ್ವರಿತ ಸಿದ್ದತೆಗಳು ನಡೆದಿವೆ.

ಪ್ರದರ್ಶನ ಒಂದು ವಾರ ಮುಂಚಿತವಾಗಿ ಹೂವುಗಳು ಅರಳುವಂತೆ ಅಲ್ಲಲ್ಲಿ ಸಾಲು ಸಾಲಗಿ ಬಣ್ಣ ಬಣ್ಣದ ಹೂವಿನ ಅಲಂಕಾರಿಕ ಗಿಡಗಳನ್ನು ನಾನಾ ವಿನ್ಯಾಸದಡಿ ಸಜ್ಜುಗೊಳಿಸಲಾಗುತ್ತಿದೆ. ಉದ್ಯಾನದಲ್ಲಿ ನರ್ಸರಿ ಹಾಗೂ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಪ್ರದರ್ಶನಕ್ಕೆಂದೇ ವಿಶೇಷವಾಗಿ ಹೂವು ತರಕಾರಿ ಹಾಗೂ ಹಣ್ಣಿನ ಸಸಗಳನ್ನು ಪ್ರದರ್ಶನಕ್ಕೆ ಅಣಿಗೊಳಿಸಲಾಗುತ್ತಿದೆ.

ಯದುವಂಶದ ಕೊನೆಯ ಮಹಾರಾಜ ಮತ್ತು ಸ್ವತಂತ್ರ ಭಾರತದ ಮೈಸೂರು ರಾಜ್ಯದ ಮೊದಲ ರಾಜ್ಯಪಾಲ ಜಯಚಾಮಾರಾಜ ಒಡೆಯರ್ ( ಜು.18 ,1919) ಜನ್ಮ ಶತಮಾನೋತ್ಸವ ಅಂಗವಾಗಿ ಈ ಭಾರಿಯ ಪುಷ್ಪ ಪ್ರದರ್ಶನವನ್ನು ಅವರಿಗೆ ಅರ್ಪಿಸುವ ಚಿಂತನೆ ನಡೆಸಿದೆ.

ಮೈಸೂರು ಉದ್ಯಾನ ಕಲಾಸಂಘ ಹಾಗೂ ರಾಜ್ಯ ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಜಯಚಾಮರಾಜೇಂದ್ರ ಒಡೆಯರ್ ಅವರ ಜೀವನ ಚರಿತ್ರೆಯನ್ನು ಫಲಪುಷ್ಪ ಗಳಿಂದ ಬರೆಯಲು ನಿರ್ಧರಿಸಲಾಗಿದೆ ಎಂದು ಅಧಿಕಾರಗಳು ತಿಳಿಸಿದರು.

ಜಯಚಾಮರಾಜೇಂದ್ರ ಒಡೆಯರ್ ಅವರು 1940 ಸೆಪ್ಟೆಂಬರ್ 8 ರಂದು ಮೈಸೂರು ಮಹಾರಾಜರಾಗಿ ಪಟ್ಟಾಭಿಷೇಕ ಗೊಂಡರು. 1947ರವರೆಗೆ ಮಹಾರಾಜರಾಗಿದ್ದರು. 1950ರ ರಿಂದ 1956 ರವರೆಗೆ ಮೈಸೂರು ರಾಜ್ಯದ ಪ್ರಮುಖರಾಗಿದ್ದರು. ಇವರು ರಾಜ್ಯದ ಅಭಿವೃದ್ಧಿಗೆ ಪ್ರಮುಖವಾದ ಪಾತ್ರ ವಹಿಸಿ ಅಪಾರವಾದ ಕೊಡುಗೆ ನೀಡಿದ್ದಾರೆ.

ಹೀಗಾಗಿ ಇವರ ಕುರಿತು ಇತಿಹಾಸ ಮಾಹಿತಿ ತಜ್ಞರಿಂದ ಮಾಹಿತಿ ಸಂಗ್ರಹಿಸಿ ಏನೆಲ್ಲಾ  ಮಾಡಲು ಸಾದ್ಯ ಎಂಬುದನ್ನು ನಿರ್ಧರಿಸಲಾಗುವುದು. ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂಸವಾರಿ, ಮೈಸೂರು ಸಂಸ್ಥಾನದ ಚಿನ್ನದ ಸಿಂಹಾಸನವನ್ನು  ಪುಷ್ಪಗಳಿಂದ  ಅನಾವರಣಗೊಳಿಸಲಾಗುವುದು. ಜತೆಗೆ ಮೈಸೂರು ಸಂಸ್ಥಾನಕ್ಕೆ ಸೇರಿದ (ಬೆಂಗಳೂರು ಮತ್ತು ಮೈಸೂರು ಅರಮನೆ ಹೊರತುಪಡಿಸಿ) ಯಾವುದಾದರೊಂದು ಅರಮನೆ ಆಯ್ಕೆ ಮಾಡಲಾಗುವುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos