ಲೈಂಗಿಕ ಕ್ರಿಯೆ ಸಂಕೋಷವೇಕೆ?

ಲೈಂಗಿಕ ಕ್ರಿಯೆ ಸಂಕೋಷವೇಕೆ?

ನಮ್ಮಲ್ಲಿ ಬಹುತೇಕ ಜನರು ಲೈಂಗಿಕ ಕ್ರಿಯೆ ಎಂದರೆ ಮೂಗು ಮುರಿಯುತ್ತಾರೆ. ಮದುವೆಯಾಗಿ ನೈತಿಕ ಸಂಬಂಧದಲ್ಲಿದ್ದು, ಸಂಗಾತಿಯ ಜೊತೆಗೆ ಲೈಂಗಿಕ ಕ್ರಿಯೆ ನಡೆಸಲು ಸಂಕೋಚ, ನಾಚಿಕೆಪಟ್ಟರೆ ಹೇಗೆ? ಇದಕ್ಕೆ ಮುಖ್ಯ ಕಾರಣ ಅದೇ ನೈತಿಕತೆ ಅಥವಾ ಇನ್ನಿತರ ಕಾರಣವಾಗಿರುತ್ತದೆ.

ಕೆಲವರು ಬೆಳೆದು ಬಂದ ವಾತಾವರಣ ಸಂಸ್ಕೃತಿ ಅವರ ಈ ಸಂಕೋಚಕ್ಕೆ ಮತ್ತು ನಾಚಿಕೆಗೆ ಕಾರಣವಾಗಿರುತ್ತದೆ. ಇನ್ನೂ ಕೆಲವೊಮ್ಮೆ ಈ ನಾಚಿಕೆಗಳನ್ನು ಮೀರಿದ ಮತ್ತೊಂದು ಕಾರಣ ಇರುತ್ತದೆ. ವಿಶ್ವದ ಹಲವೆಡೆ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡುತ್ತಿದ್ದರೂ ಸಹ ಜನರು ತಮ್ಮ ತಮ್ಮ ಸಾಂಪ್ರದಾಯಿಕ ಹಾಗೂ ಧಾರ್ಮಿಕ ಗುಣಗಳಿಂದಾಗಿ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಮೂಗು ಮುರಿಯುತ್ತಾರೆ ಮತ್ತು ಸಂಕೋಚಪಡುತಾರೆ ಎಂದರೆ ಹೇಗೆ? ಕೆಲವರ ಪ್ರಕಾರ ಇದಕ್ಕೆ ಕಾನೂನನ್ನು ತರಬೇಕು ಎಂದು ಹೇಳುವುದು ನಿಜಕ್ಕೂ ನ್ಯಾಯವಾಗಿದೆ. ಕೆಲವೆಡೆ ತುಂಬಾ ದಿನ ಲೈಂಗಿಕ ಕ್ರಿಯೆ ನಡೆಸದೆ ಇರುವುದನ್ನೇ ವಿಚ್ಛೇಧನಕ್ಕೆ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.

ಲೈಂಗಿಕ ಕ್ರಿಯೆಯಲ್ಲಿ ಸಂಕೋಚ ಎಂದರೇನು?

ಬಹುತೇಕ ಜನರು ಲೈಂಗಿಕ ಕ್ರಿಯೆ ಎಂದರೆ ಸಾಕು ನಾಚಿಕೆ ಮತ್ತು ಕೀಳರಿಮೆಯನ್ನು ಹೊಂದುತ್ತಾರೆ ಮತ್ತು ಇದು ಅವರ ಸಂಬಂಧ, ಸೃಜನಶೀಲತೆ, ಆತ್ಮ ವಿಶ್ವಾಸ, ವೃತ್ತಿ ಮತ್ತು ಸಾಮಾಜಿಕ ಸಂವಹನಗಳೆಲ್ಲದರ ಮೇಲೂ-ಒಟ್ಟಾರೆಯಾಗಿ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಈ ನಾಚಿಕೆಗೆ ಮುಖ್ಯ ಕಾರಣ ತುಂಬಾ ಯೌವನದಲ್ಲಿ. ಯೌವನದಲ್ಲಿ ಅಂದರೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ತಮ್ಮನ್ನು ತಾವು ಸ್ಪರ್ಶಿಸಿಕೊಳ್ಳುವ ಹಂತದಲ್ಲಿ, ತಮ್ಮ ಜನನಾಂಗವನ್ನು ಸ್ಪರ್ಶಿಸಿಕೊಳ್ಳಲು ತಾವೇ ನಾಚಿಕೆಪಟ್ಟುಕೊಳ್ಳುತ್ತಾ ಇರುತ್ತಾರೆ. ಜೊತೆಗೆ ತಮ್ಮ ದೇಹ ಸ್ವಚ್ಛವಾಗಿಲ್ಲ ಮತ್ತು ಕೊಳಕಾಗಿದೆ ಎಂದು ಭಾವಿಸಲು ಆರಂಭಿಸುತ್ತಾರೆ. ಲೈಂಗಿಕತೆಯು ಸ್ವಚ್ಛತೆಯ ವಿರುದ್ಧ ಪದ ಎಂದು ಅವರು ಭಾವಿಸುತ್ತಾರೆ.

ಲೈಂಗಿಕ ಕ್ರಿಯೆಯು ಸ್ವಚ್ಛತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತದೆ ಎಂದು ಅವರು ಭಾವಿಸುತ್ತಾರೆ. ಒಮ್ಮೆ ಇವರು ಪ್ರಾಯಕ್ಕೆ ಬಂದ ಮೇಲೆ, ಅವರು ಹೊಸ ಭಾವನೆಗಳನ್ನು ಅನುಭವಿಸುತ್ತಾರೆ. ರಹಸ್ಯವಾಗಿ, ಇವರು ಸಹ ತಮ್ಮ ಕುರಿತಾಗಿ ಕಲ್ಪಿಸಿಕೊಂಡು ಭಾವನೆಗಳಲ್ಲಿ ತೇಲುತ್ತಾರೆ. ಪ್ರತಿ ಬಾರಿ ಅವರು ತಮ್ಮ ಮನಸ್ಸಿನಲ್ಲಿ ತಮ್ಮನ್ನು ಊಹಿಸಿಕೊಂಡಾಗ, ತಮ್ಮ ಕಣ್ಣುಗಳಲ್ಲಿಯೇ ತಾವು ಕಡಿಮೆಯಾಗಿ ಕಾಣುತ್ತಾರೆ ಮತ್ತು ತಮ್ಮ ಪೋಷಕರ ಮಾತುಗಳನ್ನು ನಿರಾಕರಿಸುತ್ತಾರೆ.

ಇವರು ತಮ್ಮ ಪೋಷಕರು, ಸ್ನೇಹಿತರು ಮತ್ತು ಇಂಟರ್‌ನೆಟ್‌ ನೀಡುವ ಮಾಹಿತಿಗಳಿಂದ ಮುಳುಗಿ ಹೋಗುತ್ತಾರೆ. ಇದರಲ್ಲಿ ಹಲವಾರು ತಪ್ಪು ಕಲ್ಪನೆಗಳು ಸಹ ಅವರಲ್ಲಿ ಹೋಗಿ ಸೇರಿ ಹೋಗುತ್ತವೆ. ಆದರೆ ಇದಕ್ಕೆ ಇರುವ ಒಂದೇ ಮಾರ್ಗ ಎಂದರೆ ಯಾರಾದರೂ ವಯಸ್ಕರಿಂದ ಸಲಹೆಗಳನ್ನು ತೆಗೆದುಕೊಳ್ಳುವುದು. ಅದನ್ನು ಸಹ ಇವರು ನಿರಾಕರಿಸುತ್ತಾರೆ. ಇವರಿಗೆ ಲೈಂಗಿಕ ಕ್ರಿಯೆ ಎಂಬುದು ಮದುವೆಯ ನಂತರ ಮಾತ್ರ ಕಲಿಯಬೇಕಾದ ಅಂಶವಾಗಿರುತ್ತದೆ.

ಆದರೆ ಮದುವೆಯಾದ ನಂತರ ಸಹ ಇವರು ತಮ್ಮ ಸಂಕೋಚ ಮತ್ತು ನಾಚಿಕೆಗಳಿಂದಾಗಿ ಅದನ್ನು ಕಲಿಯುವುದಿಲ್ಲ. ಲೈಂಗಿಕ ಚಟುವಟಿಕೆಗಳ ಸುತ್ತ, ಇವರಿಗೆ ಹಲವಾರು ಆಲೋಚನೆಗಳು ಮತ್ತು ಕಲ್ಪನೆಗಳು ಇದ್ದರೂ ಸಹ ಅದರ ಸುತ್ತ ಪಶ್ಚಾತ್ತಾಪದ ಬೇಲಿ ಇವರು ಹಾಕಿಕೊಂಡಿರುತ್ತಾರೆ. ನಾಚಿಕೆಯು ನೋವಿನ, ಭಯದ, ಅಸ್ತವ್ಯಸ್ತತೆಯ ಮತ್ತು ಕೀಳರಿಮೆಯ ಪ್ರತಿಕ್ರಿಯೆಯನ್ನು ಸೃಷ್ಟಿಸುತ್ತದೆ. ಇದು ಹಲವಾರು ಲೈಂಗಿಕ ಸಮಸ್ಯೆಗಳ ಬುನಾದಿಯಾಗಿರುತ್ತದೆ. ಇದು ಲೈಂಗಿಕ ಶಿಕ್ಷಣವನ್ನು ಪಡೆದ ಮಕ್ಕಳಲ್ಲಿ ಲೈಂಗಿಕತೆಯ ಕುರಿತಾಗಿ ಜೀವನದ ಉಳಿದ ಭಾಗವನ್ನು ಕೀಳರಿಮೆಯಿಂದಲೇ ಸಾಗಿಸುತ್ತಾರೆ. ಅಧ್ಯಯನಗಳು ಮಕ್ಕಳಲ್ಲಿ ಅಧಿಕವಾಗಿ ಕಾಣಿಸಿಕೊಳ್ಳುವ ಕೀಳರಿಮೆಯು ಜೀವನ ಉಳಿದ ಭಾಗದಲ್ಲಿ ಕಾಣಿಸಿಕೊಳ್ಳುವ ಮಾನಸಿಕ ಡಿಸಾರ್ಡರ್‌ಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿವೆ.

ಫ್ರೆಶ್ ನ್ಯೂಸ್

Latest Posts

Featured Videos