ಬಸ್ ನಲ್ಲಿ ಲೈಂಗಿಕ ಕಿರುಕುಳ; ಆರೋಪಿ ಪತ್ತೆ

ಬಸ್ ನಲ್ಲಿ ಲೈಂಗಿಕ ಕಿರುಕುಳ; ಆರೋಪಿ ಪತ್ತೆ

ಮೈಸೂರು, ಮಾ.13, ನ್ಯೂಸ್ ಎಕ್ಸ್ ಪ್ರೆಸ್:: ಬಸ್ ನಲ್ಲಿ ಲೈಂಗಿಕ ಕಿರುಕುಳಕ್ಕೊಳಗಾಗಿದ್ದ ಯುವತಿ ನೀಡಿದ್ದ ದೂರನ್ನು ಆಧರಿಸಿ ಕರ್ನಾಟಕದ ಪೊಲೀಸರು ನಡೆಸಿರುವ ಕಾರ್ಯಾಚರಣೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ತನಗೆ ಲೈಂಗಿಕ ಕಿರುಕುಳ ನೀಡಿದ್ದ ವ್ಯಕ್ತಿಯ ಬಗ್ಗೆ ದೂರು ನೀಡಿದ 48 ಗಂಟೆಗಳಲ್ಲಿ ಪತ್ತೆ ಹೆಚ್ಚಿದ ಪೊಲೀಸರಿಗೆ ಸಂತ್ರಸ್ತ ಯುವತಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯ ಪಿಎಸ್ ಐ ಪೂಜಾ ಅವರ ಕಾರ್ಯಾಚರಣೆಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದಾರೆ. ನನ್ನ ರಕ್ಷಣೆಗೆ ಧಾವಿಸಿದ ಲಷ್ಕರ್ ಪೊಲೀಸ್ ಠಾಣೆಯ ಪಿಎಸ್ ಐ ಪೂಜಾ ಅವರಿಗೆ ಧನ್ಯವಾದಗಳು ನಿಮ್ಮ ರೀತಿಯ ಅಧಿಕಾರಿಗಳಿಂದ ನ್ಯಾಯ ವ್ಯವಸ್ಥೆಯ ಮೇಲೆ ನಂಬಿಕೆ ಉಳಿದಿದೆ, ಮತ್ತೊಮ್ಮೆ ಧನ್ಯವಾದ ತಿಳಿಸುತ್ತೇನೆ ಎಂದು ಸಂತ್ರಸ್ತ ಯುವತಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಗೆ 100 ಲೈಕ್ ಗಳು ಬಂದಿವೆ.

ಮಂಗಳೂರು-ಮೈಸೂರಿಗೆ ಸಂಚರಿಸುವ ಐರಾವತ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿರುವ ಕೊಡಗು ಮೂಲದ ಯುವತಿ ಹಿಂಭಾಗದ ಸೀಟ್ ನಲ್ಲಿ ಕುಳಿತಿದ್ದ 50 ವರ್ಷದ ವ್ಯಕ್ತಿ ಈಕೆಯನ್ನು ಅನುಚಿತವಾಗಿ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಪದೇ ಪದೇ ಇದನ್ನು ಗಮನಿಸಿದ ಯುವತಿ ಆತನೊಂದಿಗೆ ವಾಗ್ವಾದಕ್ಕೆ ಮುಂದಾಗಿದ್ದಾರೆ. ಆದರೆ ಬಸ್ ನಲ್ಲಿದ್ದ ಯಾರೂ ಸಹ ಯುವತಿಯ ಬೆಂಬಲಕ್ಕೆ ಧಾವಿಸಲಿಲ್ಲ. ವಿಚಿತ್ರವೆಂದರೆ ಬಸ್ ನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಸಹ ಯುವತಿಗೆ ರಕ್ಷಣೆಗೆ ಧಾವಿಸಲಿಲ್ಲ. ಆದರೆ ಘಟನೆಯನ್ನು ಅಲ್ಲಿಗೇ ಬಿಡದ ಯುವತಿ, ಅದನ್ನು ಕೆಎಸ್ ಆರ್ ಟಿಸಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ನಂತರ ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದು, ಘಟನೆಯನ್ನು ವಿವರಿಸಿದ್ದಾರೆ. ಆಯುಕ್ತರ ಕಚೇರಿಯಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಮುತ್ತುರಾಜು ಸ್ಥಳೀಯ ಲಷ್ಕರ್ ಪೊಲೀಸ್ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ಪಿಎಸ್ಐ ಪೂಜಾ 48 ಗಂಟೆಗಳಲ್ಲಿ ಆರೋಪಿಯನ್ನು ಪತ್ತೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos