ಕುಸ್ತಿಪಟ್ಟು ಚೌಗಲೆ ಇನ್ನಿಲ್ಲ

ಕುಸ್ತಿಪಟ್ಟು ಚೌಗಲೆ ಇನ್ನಿಲ್ಲ

ಪುಣೆ, ಅ.21 : ರೆಸ್ಲರ್ ಲೆಜೆಂಡ್ ದಾದು ಚೌಗುಲೆ ಅಂತರರಾಷ್ಟ್ರೀಯ ಕುಸ್ತಿಪಟ್ಟು ದಾದು ಚೌಗಲೆ (73) ಕೋಲ್ಲಾಪುರದಲ್ಲಿ ತೀವ್ರ ಹೃದಯಾಘಾತದಿಂದನಿಧನರಾಗಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಧ್ಯಾಹ್ನ 2 ಗಂಟೆಗೆ ನಿಧನರಾದರು ಎಂದು ಕುಟುಂಬ ಮೂಲ ತಿಳಿಸಿವೆ. ಇಬ್ಬರು ಪುತ್ರರು ಇದ್ದಾರೆ. ರೆಸ್ಲರ್ ಲೆಜೆಂಡ್ ದಾದು ಚೌಗುಲೆ (73) ರವಿವಾರ ಕೊಲ್ಹಾಪುರದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. 1974ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ ಅವರು, ಮಹಾರಾಷ್ಟ್ರ ಕೇಸರಿ, ರುಸ್ತುಂ ಹಿಂದ್ ಕೇಸರಿ, ಮಹಾನ್ ಭಾರತ್ ಕೇಸರಿ ಮೊದಲಾದ ಪ್ರಶಸ್ತಿಗಳಿಗಗೆ ಭಾಜನರಾಗಿದ್ದರು. ಜೀವಮಾನದ ಸಾಧನೆಗಾಗಿ ಧ್ಯಾನ್ಚಂದ್ ಪ್ರಶಸ್ತಿಯನ್ನೂ ಪಡೆದಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos