ಗರ್ಬಾ ಡ್ಯಾನ್ಸ್: ಕುಸಿದು ಬಿದ್ದು ವ್ಯಕ್ತಿ ಸಾವು

ಗರ್ಬಾ ಡ್ಯಾನ್ಸ್: ಕುಸಿದು ಬಿದ್ದು ವ್ಯಕ್ತಿ ಸಾವು

ಜೈಪುರ, ಅ. 8 : ಗರ್ಬಾ ಡ್ಯಾನ್ಸ್(ಗುಜರಾತಿ ಶೈಲಿಯ ನೃತ್ಯ) ಹಿನ್ನಲೆ ವ್ಯಕ್ತಿ ಕುಸಿದು ಬಿದ್ದು ಮೃತಪಟ್ಟ ಘಟನೆ ರಾಜಸ್ಥಾನದ ಮೌಂಟ್ ಅಬುದಲ್ಲಿ ನಡೆದಿದೆ. ಜಗದೀಶ್ ಮೃತ ವ್ಯಕ್ತಿ. ಜಗದೀಶ್ ಮೂಲತಃ ಗುಜರಾತ್ನ ಸುರತ್ ನಿವಾಸಿ. ತಮ್ಮ ಪತ್ನಿ ಹಾಗೂ ಐವರು ದಂಪತಿ ಜೊತೆ ವೀಕೆಂಡ್ ಕಳೆಯಲು ರಾಜಸ್ಥಾನದ ಮೌಂಟ್ ಅಬುಗೆ ಆಗಮಿಸಿ ಗರ್ಬಾ ಮಾಡುತ್ತಿದ್ದ ಹಿನ್ನಲೆ ಮೃತಪಟ್ಟಿದ್ದಾರೆ. ವೀಕೆಂಡ್ ಕಳೆಯಲು ನಾವು ಸುರತ್ನಿಂದ ಮೌಂಟ್ ಅಬುಗೆ ಬಂದಿದ್ದೇವು. ಭಾನುವಾರ ನಾವು ಹೊರಗೆ ಸುತ್ತಾಡಿ ನಮ್ಮ ಹೋಟೆಲಿಗೆ ಹಿಂತಿರುಗಿದ್ದೇವು. ಹೋಟೆಲಿಗೆ ಹಿಂತಿರುಗಿದ್ದಾಗ ಅಲ್ಲಿ ಗರ್ಬಾ ನೃತ್ಯವನ್ನು ಆಯೋಜಿಸಲಾಗಿತ್ತು. ಆಗ ನಾವು ಕೂಡ ಗರ್ಬಾ ಡ್ಯಾನ್ಸ್ ಮಾಡಲು ಶುರು ಮಾಡಿದ್ದೇವೆ ಎಂದು ಜಗದೀಶ್ ಸ್ನೇಹಿತರೊಬ್ಬರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos