ಕುರಿಕಾಯೋ ಸ್ಥಳದಲ್ಲೇ ತಾಳಿ ಕಟ್ಟಿದ

ಕುರಿಕಾಯೋ ಸ್ಥಳದಲ್ಲೇ ತಾಳಿ ಕಟ್ಟಿದ

ಚಿತ್ರದುರ್ಗ, ನ. 10 : ಪರಸ್ಪರ ನಾಲ್ಕು ವರ್ಷದಿಂದ ಪ್ರೀತಿದ ಪ್ರೇಮಿಗಳಿಬ್ಬರು ಕುರಿ ಹಟ್ಟಿಯಲ್ಲಿ ಮದುವೆಯಾಗಿರುವ ಜಿಲ್ಲೆಯ ಹಿರಿಯೂರು ತಾಲೂಕಿನ ಚಿನ್ನಯ್ಯನಹಟ್ಟಿಯಲ್ಲಿ ನಡೆದಿದೆ. ಅಮೃತಾ ಕುರಿಗಾಹಿ ಅರುಣ್ ಜೊತೆ ಕುರಿಹಟ್ಟಿ ಬಳಿ ವಿವಾಹವಾಗಿದ್ದಾಳೆ. ವೃತ್ತಿ ಶಿಕ್ಷಣ ಪಡೆದ ( ಎಂಎ) ಓದುತ್ತಿರುವ ಯುವತಿ ಅಮೃತ. ಕುರಿಗಾಹಿ ಅರುಣ್ ಕಡಿಮೆ ಇಲ್ಲ ಎಂದಿದ್ದಾಳೆ.
ನನಗೆ ತುಂಬಾ ಖುಷಿಯಾಗಿದೆ. ಅವನು ಚೆನ್ನಾಗಿ ದುಡಿಯುತ್ತಾನೆ. ಅವನಿಗೂ ನಾನು ಮದುವೆಯಾದ ಮೇಲೆ ನನ್ನ ಹೆಂಡತಿಯನ್ನು ಹೀಗೆ ನೋಡಿಕೊಳ್ಳಬೇಕು ಎಂಬ ಆಸೆ-ಆಕಾಂಕ್ಷೆ ಇರುತ್ತದೆ. ನನಗೆ ಡಾಕ್ಟರ್, ಎಂಜಿನಿಯರ್ ಮಾಡಿದವರನ್ನು ಮದುವೆಯಾಗಬೇಕೆಂಬ ಆಸೆ ಇರಲಿಲ್ಲ. ಒಳ್ಳೆಯವರಾಗಿದ್ದರೆ ಸಾಕು ಅಂದುಕೊಂಡಿದ್ದೆ. ನಾನು ಪ್ರೀತಿ ಮಾಡಿದ್ದೆ. ಹೀಗಾಗಿ ಇವನ ಮೇಲೆ ನಂಬಿಕೆ ಇತ್ತು  ಎಂದು ತಮ್ಮ ಪ್ರೀತಿಯ ಬಗ್ಗೆ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos