ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ: ಕುಮಾರಸ್ವಾಮಿ

ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ: ಕುಮಾರಸ್ವಾಮಿ

ಮಂಡ್ಯ: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಎಲ್ಲಾ ಪಕ್ಷಗಳು ಪ್ರಚಾರಕ್ಕೆ ಇಳಿದಿದ್ದಾರೆ. ಎಂದಿನಂತೆ ಈ ಬಾರಿಯೂ ಮಂಡ್ಯ ಲೋಕಸಭೆ ರಣರಂಗವಾಗಿ ಮಾರ್ಪಟ್ಟಿದೆ. ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಟಾರ್ ಚಂದ್ರು ಕಣಕ್ಕಿಳಿದಿದ್ದಾರೆ, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಎಚ್ ಡಿ ಕುಮಾರಸ್ವಾಮಿ ಅವರು ಕಣಕ್ಕಿಳಿದಿದ್ದಾರೆ.

ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದು, ‘ನಾನು ಮಂಡ್ಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ನನ್ನ ಮೇಲೆ‌ ವಿಶ್ವಾವಿಡಿ ಎಂದು ಮಂಡ್ಯ ಜನಗಳಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.

ಇನ್ನು ಈಗಾಗಲೇ ನನ್ನ ಮೇಲೆ ಮಂಡ್ಯ ಜನರು ವಿಶ್ವಾಸ ಇಟ್ಟಿದ್ದೀರಾ. ಯಾವ ರಾಜಕೀಯ ನಾಯಕರು ಮಂಡ್ಯ ಜಿಲ್ಲೆಯಲ್ಲಿ ನನ್ನಷ್ಟು ಮದುವೆ ಸಮಾರಂಭಗಳಿಗೆ ಹೋಗಿಲ್ಲ. ಹಲವು ಜಿಲ್ಲೆಗಳಲ್ಲಿ ಬಿಜೆಪಿ-ಜೆಡಿಎಸ್ ನಾಯಕರು ನನ್ನನ್ನು ಪ್ರಚಾರಕ್ಕೆ ಕರೆಯುತ್ತಿದ್ದಾರೆ. ಸಾಕಷ್ಟು ಕಡೆ ನಾನು‌ ಹೋಗಬೇಕಾದ ಅನಿವಾರ್ಯತೆ ಇದೆ ಎಂದಿದ್ದಾರೆ.

ಇನ್ನು ನಾವು ನುಡಿದಂತೆ ನಡೆದಿದ್ದೇವೆ ಅಂತಾರೆ. ಎರಡು ಸಾವಿರದಲ್ಲಿ ಏನು ಮಾಡ್ತೀರಾ. ಅದು ಯಾರ ದುಡ್ಡು, ಆ ದುಡ್ಡು ನಿಮ್ಮದೆ. ಈ ಉಚಿತ ಯೋಜನೆಯಿಂದ ಹೊಸ ಯೋಜನೆ ಮಾಡುವುದಕ್ಕೆ ಆಗುತ್ತಿಲ್ಲ. ಅದಕ್ಕಾಗಿ ಕೇಂದ್ರ ಸರ್ಕಾರದ ಮೇಲೆ‌ ಗೂಬೆ ಕೂರಿಸುತ್ತಿದ್ದಾರೆ.

ಕೇಂದ್ರ ಸರ್ಕಾರ ಎಲ್ಲದಕ್ಕೂ ಹಣ ಕೊಡಲು ರೆಡಿ ಇದೆ. ಇವರು ಯೋಜನೆಯನ್ನು ಸಿದ್ದಪಡಿಸಿಲ್ಲ, ಯೋಜನೆ‌ ಇಲ್ಲದೇ ಕೇಂದ್ರ ಹೇಗೆ ಹಣ ನೀಡುತ್ತೆ. ಈ ಬಾರಿ ನನಗೆ ಮತ ನೀಡಿ ಗೆಲ್ಲಿಸಿ. ನಿಮಗಾಗಿ ದುಡಿಯಲು ಇನ್ನೊಮ್ಮೆ ಅವಕಾಶ ನೀಡಿ ಎನ್ನುವ ಮೂಲಕ ಮಂಡ್ಯ ಜನರ ಬಳಿ ಮತಯಾಚನೆ ಮಾಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos