ತುಮಕೂರುನಲ್ಲಿ ಮಿನಿ ಎಟಿಎಂ

ತುಮಕೂರುನಲ್ಲಿ ಮಿನಿ ಎಟಿಎಂ

ತುಮಕೂರು, ಜೂ. 27 : ತುಮಕೂರು ಮರ್ಚೆಂಟ್ಸ್ ಕ್ರೆಡಿಟ್ ಕೋ-ಆಪರೇಟಿವ್ ರಾಜ್ಯದಲ್ಲೇ ಮೊದಲ ಬಾರಿಗೆ ಶೀಘ್ರ ಮಿನಿ ಎಟಿಎಂ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದೆ.ನಗರದ 15 ಕಡೆ ಕೌಂಟರ್ ಗಳನ್ನು ತೆರೆಯಲಾಗುತ್ತಿದ್ದು, ಗ್ರಾಹಕರು ಸ್ವೈಪಿಂಗ್ ಮೆಷಿನಲ್ಲಿ ತಮ್ಮ ಎಟಿಎಂ ಕಾರ್ಡ್ ಅನ್ನು ಸ್ವೈಪ್ ಮಾಡಿ ವಿವರ ದಾಖಲಿಸಿದೊಡನೆ ಕೌಂಟರ್ ನೊಳಗೆ ಬ್ಯಾಂಕ್ ಸಿಬ್ಬಂದಿ ಹಣವನ್ನು ನೀಡಲಿದ್ದಾರೆ ಎಂದು ಟಿಎಂಸಿಸಿ ಅಧ್ಯಕ್ಷ ಎನ್.ಎಸ್.ಜಯಕುಮಾರ್ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಶದ ಯಾವುದೇ ಬ್ಯಾಂಕ್ ಎಟಿಎಂ ಕಾರ್ಡ್ ಬಳಸಿ ಗ್ರಾಹಕರು ಒಂದು ಬಾರಿಗೆ  10,000 ರು.ನಂತೆ 5 ಬಾರಿ ಸ್ವೈಪ್ ಮಾಡಿ  50,000 ರು. ಹಣವನ್ನು ಡ್ರಾ ಮಾಡಬಹುದಾಗಿದೆ ಎಂದು ತಿಳಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos