ಜನ್ಮದಿನದಂದು ದಾಖಲೆ ಬರೆದ ಕುಲದೀಪ್!

ಜನ್ಮದಿನದಂದು ದಾಖಲೆ ಬರೆದ ಕುಲದೀಪ್!

ಬೆಂಗಳೂರು: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಕುಲದೀಪ್ ಯಾದವ್ ಅದ್ಭುತವಾಗಿ ಬೌಲಿಂಗ್ ಮಾಡಿ,  ಐದು ಬ್ಯಾಟ್ಸ್‌ಮನ್‌ಗಳಿಗೆ ಪೆವಿಲಿಯನ್ ಹಾದಿ ತೋರಿಸಿದ್ದಾರೆ. ಈ ಮೂಲಕ 5 ವಿಕೆಟ್ ಕಬಳಿಸಿ, ಆತಿಥೇಯ ತಂಡವನ್ನು 95 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ  ಯಶಸ್ವಿಯಾಯಿತು. ಅಲ್ಲದೆ ಕುಲದೀಪ್ ಯಾದವ್ ಕೂಡಾ ತಮ್ಮ ಹೆಸರಿನಲ್ಲಿ ಹಲವು ದೊಡ್ಡ ದಾಖಲೆಗಳನ್ನು  ಸೇರಿಕೊಳ್ಳುವಲ್ಲಿ  ಯಶಸ್ವಿಯಾಗಿದರು. ಅಂದ ಹಾಗೆ ನಿನ್ನೆ ಕುಲದೀಪ್ ಯಾದವ್ ಜನ್ಮ ದಿನ ಕೂಡಾ ಆಗಿತ್ತು ಎನ್ನುವುದು ವಿಶೇಷ.

ಈ ಪಂದ್ಯದಲ್ಲಿ ಕುಲದೀಪ್ ಯಾದವ್ ತಮ್ಮ ಸ್ಪಿನ್ ಬೌಲ್ ನಿಂದ ಡೊನೊವನ್ ಫೆರೇರಾ ಅವರನ್ನು  ಕ್ಲೀನ್ ಬೌಲ್ಡ್ ಮಾಡಿದರು. ಇದಾದ ನಂತರ ಒಬ್ಬರ ಹಿಂದೆ ಒಬ್ಬರಂತೆ ವಿಕೆಟ್ ಕಳಚುತ್ತಲೇ ಹೋಯಿತು. ಕುಲದೀಪ್ 5 ಎಸೆತಗಳಲ್ಲಿ 4 ವಿಕೆಟ್ ಪಡೆದರು. ಈ ಸ್ಪಿನ್ನರ್ ಎರಡನೇ ಇನಿಂಗ್ಸ್ ನ 11ನೇ ಓವರ್ ನ ಕೊನೆಯ ಎಸೆತದಲ್ಲಿ ಕೇಶವ್ ಮಹಾರಾಜ್ ಅವರನ್ನು ಬೌಲ್ಡ್ ಮಾಡಿದರು. ಇದಾದ ಬಳಿಕ ತಮ್ಮ ಮುಂದಿನ ಓವರ್ (13ನೇ) ನ ಮೊದಲ ಎಸೆತದಲ್ಲಿಯೇ ನಾಂದ್ರೆ ಬರ್ಗರ್ ಅವರನ್ನು ಎಲ್ ಬಿಡಬ್ಲ್ಯುಗೆ ಔಟ್ ಮಾಡಿದರು. ಆ ಓವರ್‌ನ ಎರಡನೇ ಎಸೆತ ಡಾಟ್ ಆಗಿತ್ತು. ಮೂರನೇ ಎಸೆತದಲ್ಲಿ ಲಿಜಾಡ್ ವಿಲಿಯಮ್ಸ್ ಲೆಗ್ ಬಿಫೋರ್  ವಿಕೆಟ್ ಬಿತ್ತು. ನಾಲ್ಕನೇ ಎಸೆತದಲ್ಲಿ 1 ರನ್ ಗಳಿಸಲಾಯಿತು. ಕುಲದೀಪ್ ಮುಂದಿನ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ದೊಡ್ಡ ವಿಕೆಟ್ ಪಡೆಯುವ ಮೂಲಕ ಪಂದ್ಯವನ್ನು ಅಂತ್ಯಗೊಳಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos