ಮತ್ತಿನಲ್ಲಿ ಕಾರು ಚಲಾಯಿಸಿದ ಮಹಿಳೆ

ಮತ್ತಿನಲ್ಲಿ ಕಾರು ಚಲಾಯಿಸಿದ ಮಹಿಳೆ

ಬೆಂಗಳೂರು, ಅ. 24 : ರಾಜ್ಯ ರಾಜಧಾನಿಯಲ್ಲಿ ವಕೀಲೆಯೊಬ್ಬರು ಮದ್ಯ ಸೇವಿಸಿ, ಕುಡಿದ ಮತ್ತಿನಲ್ಲೆ ಕಾರು ಚಲಾಯಿಸಿ ಗೂಡ್ಸ್ ಆಟೋಗೆ ಡಿಕ್ಕಿ ಹೊಡೆದ ಘಟನೆ ಬೆಂಗಳೂರಿನ ತಿಲಕನಗರ ಮುಖ್ಯರಸ್ತೆಯ ಪೊಲೀಸ್ ಠಾಣೆ ಮುಂಭಾಗದಲ್ಲೇ ಘಟನೆ ನಡೆದಿದೆ. ಮಹಿಳೆ ತಮ್ಮ ಮೊಬೈಲ್ನಲ್ಲಿ ಪೊಲೀಸರ ಪ್ರಯತ್ನವನ್ನು ಚಿತ್ರೀಕರಿಸುತ್ತ ಅವರನ್ನೇ ನಿಂದಿಸುತ್ತಿದ್ದರು. ಕೊನೆಗೆ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಕರೆಯಿಸಿ ಬಲವಂತವಾಗಿ ಅವರನ್ನು ಕಾರಿನಿಂದ ಕೆಳಕ್ಕೆ ಇಳಿಸಲಾಗಿದೆ. ನಂತರ ಆ ಮಹಿಳೆಯನ್ನು ಡ್ರಿಂಕ್ ಆ್ಯಂಡ್ ಡ್ರೈವ್ ಚೆಕ್ ಮಾಡಿಸಿ ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಪ್ರಾಣಾಪಾಯವಾಗಿಲ್ಲ. ಗೂಡ್ಸ್ ಆಟೋದ ಹಿಂಭಾಗಕ್ಕೆ ಕಾರು ಡಿಕ್ಕಿ ಹೊಡೆದ ಕಾರಣ ಕಾರು ಚಲಾಯಿಸುತ್ತಿದ್ದ ವಕೀಲೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಕೋ ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos