ಕುಡಿದ ಮತ್ತಿನಲ್ಲಿ ಕಿಸ್ ನೀಡಿದ ವ್ಯಕ್ತಿ ಬಂಧನ

ಕುಡಿದ ಮತ್ತಿನಲ್ಲಿ ಕಿಸ್ ನೀಡಿದ ವ್ಯಕ್ತಿ ಬಂಧನ

ಹೈದರಾಬಾದ್ ,ಜು. 30 : ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಕೆಲಸದ ಮೇಲಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ಗೆ ಕಿಸ್ ನೀಡಿರುವುದು ಹೈದರಾಬಾದಿನಲ್ಲಿ ನಡೆದಿದೆ. ಹೈದರಾಬಾದ್ನಲ್ಲಿ ಬೊನಾಲು ಹಬ್ಬವನ್ನು ಆಚರಿಸಲಾಗುತ್ತಿತ್ತು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆಗಾಗಿ ಪೊಲೀಸರನ್ನು ನೇಮಿಸಲಾಗಿತ್ತು. ನಗರದಲ್ಲಿ ವಾರ್ಷಿಕ ಹಿಂದೂ ಹಬ್ಬದ ಆಚರಣೆ ಹಿನ್ನಲೆ ಕುಡಿದ ಮತ್ತಿನಲ್ಲಿ ವ್ಯಕ್ತಿಯೋರ್ವ ಮುತ್ತು ನೀಡಿದ್ದಾನೆ. ಸಬ್ ಇನ್ಸ್ಪೆಕ್ಟರ್ ಕೋಪಗೊಂಡು ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಲಾಗಿದೆ. ಹಬ್ಬದ ನಿಮಿತ್ತ ಮೆರವಣಿಗೆ ನಡೆಸುತ್ತಿದ್ದ ವೇಳೆ ಭದ್ರತಾ ಕಾರ್ಯದಲ್ಲಿ ತೊಡಗಿಕೊಂಡಿದ್ದೆವು. ಮೆರವಣಿಗೆ ಜೊತೆ ತೆರಳುತ್ತಿದ್ದಾಗ ನನಗೆ ಭಾನು ಎಂಬ ವ್ಯಕ್ತಿ ಕುಡಿದ ಅಮಲಿನಲ್ಲಿ ಮುತ್ತು ಕೊಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹೇಂದ್ರ ಅವರು ವಿವರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos