ಕುಂದಗೋಳ ಉಪ ‘ಸಮರಕ್ಕೆ’ ನಾಳೆ ಮತದಾನ

ಕುಂದಗೋಳ ಉಪ ‘ಸಮರಕ್ಕೆ’ ನಾಳೆ ಮತದಾನ

ಹುಬ್ಬಳ್ಳಿ, ಮೇ. 18, ನ್ಯೂಸ್ ಎಕ್ಸ್ ಪ್ರೆಸ್ : ನಾಳೆ ಕುಂದಗೋಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗದಿಂದ ಸಂಪೂರ್ಣ  ಸಜ್ಜುಗೊಂಡಿದೆ.

ಕುಂದಗೋಳ ಹರಭಟ್ಟ ಕಾಲೇಜನಲ್ಲಿ ಮಸ್ಟರಿಂಗ್ ಕಾರ್ಯ ನಡೆಯುತ್ತಿದ್ದು, ಕ್ಷೇತ್ರದಲ್ಲಿ ಒಟ್ಟು 1 ಲಕ್ಷದ 89 ಸಾವಿರದ 435 ಮತದಾರರಿದ್ದಾರೆ.  ಹೀಗಾಗಿ ಒಟ್ಟು 214 ಮತಗಟ್ಟೆ ನಿರ್ಮಿಸಲಾಗಿದೆ.  ಚುನಾವಣಾ ಕರ್ತವ್ಯಕ್ಕೆ 968 ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಆಯೋಗ ನಿಯೋಜಿಸಿದೆ.  ಪ್ರತಿ ಮತಗಟ್ಟೆಗೆ ಒಂದರಂತೆ ಕಂಟ್ರೋಲ್ ಯುನಿಟ್, ಬ್ಯಾಲೆಟ್ ಯುನಿಟ್,ವಿವಿಪ್ಯಾಟ್ ಅಳವಡಿಸಿದೆ. 18 ಜನ ಸೆಕ್ಟರ್ ಅಧಿಕಾರಿಗಳನ್ನು ನೇಮಕ, ತಾಂತ್ರಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಬಿಇಎಲ್ ಇಂಜನಿಯರ್  ಮೂರು ತಂಡ ರಚನೆ ಮಾಡಲಾಗಿದೆ. ಇಬ್ಬರು ಡಿವೈಎಸ್ಪಿ, 6 ಪೊಲೀಸ್ ಇನ್ಸ್ ಸ್ಪೆಕ್ಟರ್, 17 ಪಿಎಸ್‌ಐ, 41 ಎಎಸ್‌ಐ, 114 ಮುಖ್ಯಪೇದೆಗಳು, 144 ಪೊಲೀಸ್ ಪೇದೆಗಳು, 216  ಗೃಹರಕ್ಷಕ ದಳದ ಸಿಬ್ಬಂದಿ ಮತ್ತು 68 ಜನ ಅರಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಕ್ಷೇತ್ರದಲ್ಲಿ 38 ಸೂಕ್ಷ್ಮ ಹಾಗೂ 33 ಅತಿಸೂಕ್ಷ ಮತಗಟ್ಟೆಗಳೆಂದು ಗುರುತಿಸಿರುವ ಆಯೋಗ, ಸೂಕ್ತ ಬಂದೋಬಸ್ತ್ ಮಾಡಿದೆ. ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಶಾಹಿ ಹಾಕಲು ಆಯೋಗ ಸೂಚನೆ ನೀಡಿದೆ.

ಫ್ರೆಶ್ ನ್ಯೂಸ್

Latest Posts

Featured Videos