ರಾಜ್ಯ ಬಿಜೆಪಿ ಬಿಎಸ್​ವೈ ಮತ್ತು ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ: ಕೆ.ಎಸ್​.ಈಶ್ವರಪ್ಪ

ರಾಜ್ಯ ಬಿಜೆಪಿ ಬಿಎಸ್​ವೈ ಮತ್ತು ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ: ಕೆ.ಎಸ್​.ಈಶ್ವರಪ್ಪ

ಶಿವಮೊಗ್ಗ: ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಪಕ್ಷೇತರ ಅಭ್ಯರ್ಥಿಯಾಗಿ ನಾನು ನಿಲ್ಲುವುದು ಖಚಿತ ಎಂದು ಮಾಜಿ ಸಚಿವ ಈಶ್ವರಪ್ಪ ಮತ್ತೊಮ್ಮೆ ಸ್ಪಸ್ಟಿಕರೀಸಿದ್ದಾರೆ. ರಾಜ್ಯ ಬಿಜೆಪಿ ಬಿಎಸ್ ಯಡಿಯೂರಪ್ಪ ಹಾಗೂ ಅವರ ಕುಟುಂಬದ ಮುಷ್ಟಿಯಲ್ಲಿ ಸಿಲುಕಿದೆ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ನನ್ನ ಹೋರಾಟ ನಡೆಯಲಿದೆ ನನ್ನ ನಿಲುವಿನಲ್ಲಿ ಯಾವ ಬದಲಾವಣೆ ಇಲ್ಲ ಸ್ವತಂತ್ರವಾಗಿ ಶಿವಮೊಗ್ಗದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದರು.

ಶಿವಮೊಗ್ಗದಲ್ಲಿ ಮಾತನಾಡಿದ ಬಿಜೆಪಿ ಮಾಜಿ ಶಾಸಕ ಕೆ.ಎಸ್.ಈಶ್ವರಪ್ಪ, ಪಕ್ಷ ತಂದೆ ಮಕ್ಕಳ ಕೈಗೆ ಸಿಕ್ಕಿದೆ. ಇದರಿಂದ ಕಾರ್ಯಕರ್ತರು ಪರದಾಡುತ್ತಿದ್ದಾರೆ. ಪಕ್ಷ ಉಳಿಸಲು ನನ್ನ ಈ ಹೋರಾಟ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಸ್ಥಾನವನ್ನು ಲಿಂಗಾಯತ ಯತ್ನಾಳ್​, ಒಕ್ಕಲಿಗರಾದ ಸಿ.ಟಿ.ರವಿ, ಹಿಂದುಳಿದ ನನಗೆ ಯಾಕೆ ಕೊಟ್ಟಿಲ್ಲ. ಪಕ್ಷ ಸಂಘಟನೆ ದೃಷ್ಟಿಯಿಂದ ಇವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕಿತ್ತು. ಅದು ಬಿಟ್ಟು ಬಿ.ವೈ.ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದರು. ನಾನು ಹಿಂದುತ್ವದ ವಿಚಾರದ ಮೇಲೆ ಚುನಾವಣೆ ಮಾಡುತ್ತೇನೆ. ರಾಘವೇಂದ್ರ ಲಿಂಗಾಯತ ಅಂತಾ ಚುನಾವಣೆ ಮಾಡುತ್ತಾರೆ.

ರಾಜ್ಯ ಬಿಜೆಪಿ ಬಿಎಸ್​ವೈ ಮತ್ತು ಅವರ ಕುಟುಂಬದ ಮುಷ್ಠಿಯಲ್ಲಿ ಸಿಲುಕಿದೆ. ಆಸಂಘಟನೆಯು ಅವರ ಕೈಯಲ್ಲಿ ಸಿಲುಕಿದೆ. ಇದನ್ನು ಸರಿ ಮಾಡಲು ಈ ನಿರ್ಧಾರ ತೆಗೆದುಕೊಂಡಿರುವೆ. ನಾನು ಜಗಜ್ಯೋತಿ ಬಸವಣ್ಣನವರ ಅನುಯಾಯಿ ಆಗಿ ಕ್ಷೇತ್ರದಲ್ಲಿ ಮತ ಕೇಳುತ್ತೇನೆ ಎಂದರು.

ಫ್ರೆಶ್ ನ್ಯೂಸ್

Latest Posts

Featured Videos