ಕೆಸರು ಗದ್ದೆಯಲ್ಲಿ ಕುಣಿದಾಡಿ ಮಕ್ಕಳು

ಕೆಸರು ಗದ್ದೆಯಲ್ಲಿ  ಕುಣಿದಾಡಿ ಮಕ್ಕಳು

ಮಂಗಳೂರು,ಜು. 26 : ಮಕ್ಕಳು, ಯುವಕ- ಯುವತಿಯರೆಲ್ಲ ಸೇರಿ ಗದ್ದೆಯ ಕೆಸರು ನೀರಿನಲ್ಲಿ ಆಡಿ, ಕುಣಿದಾಡಿದ ಮಂಗಳೂರಿನಲ್ಲಿ ಕಂಡು ಬಂದಿದೆ. ನಗರ ಹೊರವಲಯದ ಪಾವಂಜೆಯಲ್ಲಿ ಹಳ್ಳಿ ಸೊಗಡಿನ ಉಣಬಡಿಸಿತ್ತು. ಇಲ್ಲಿ ನಗರದ ಬಹುತೇಕ ಶಾಲೆಗಳ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಸೇರಿದ್ದರು.

ಯುವಕ- ಯುವತಿಯರು ಸೇರಿ ಕೆಸರಿನ ಪರಿವೇ ಇಲ್ಲದಂತೆ ಕುಣಿದಾಡುತ್ತಾ ಆಟವಾಡಿದ್ದಾರೆ. ನೀರಾಟದ ಜೊತೆಗೆ ಫಿಲ್ಮಿ ಹಾಡುಗಳಿಗೆ ವಿದ್ಯಾರ್ಥಿಗಳು ಗಡದ್ದಾಗಿ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆಯಿತು. ಹೀಗೆ ಕೆಸರಿನಾಟದಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಕೆಸರಿನಲ್ಲಿ ಹಗ್ಗ ಜಗ್ಗಾಟ, ವಾಲಿಬಾಲ್ ಆಟಗಳ ಜೊತೆ ಹಳ್ಳಿ ಮೂಲದ ಜನಪದ ಕ್ರೀಡೆಗಳು ನಗರದ ಮಕ್ಕಳು, ಮಹಿಳೆಯರಿಗೆ ಹಳ್ಳಿ ಬದುಕಿನ ಚಿತ್ರಣವನ್ನು ನೀಡುವಂತಿತ್ತು. ಹಿಮ್ಮುಖ ಓಟ, ಒಂಟಿ ಕಾಲಿನ ಓಟ, ನಿಧಿ ಹುಡುಕಾಟ, ಮಹಿಳೆಯರ ಹಗ್ಗಜಗ್ಗಾಟ ಹೀಗೆ ಹತ್ತು ಹಲವು ಕ್ರೀಡೆಗಳು ಒಂದೇ ದಿನದಲ್ಲಿ ಹಳ್ಳಿ ಹೈದರನ್ನು ಸೃಷ್ಟಿಸುವಂತೆ ಮಾಡಿತ್ತು. ಪರಸ್ಪರ ಕೆಸರಿನ ಎರಚಾಟ, ಕೆಸರಿನಲ್ಲಿ ಉರುಳಾಡಿದ್ದು ನಗರದ ವಿದ್ಯಾರ್ಥಿಗಳಿಗೆ ದೇಸಿ ಸೊಗಡನ್ನು ಪರಿಚಯ ಮಾಡಿತ್ತು.

ಫ್ರೆಶ್ ನ್ಯೂಸ್

Latest Posts

Featured Videos